






ಗುರುವಾಯನಕೆರೆ: ಕೃಷಿ ವಿಜ್ಞಾನ ವಿಭಾಗದಲ್ಲಿ ಸುಮಾರು 5,000 ವಿದ್ಯಾರ್ಥಿಗಳ ಪೈಕಿ 53ನೇ ರ್ಯಾಂಕ್ ಗಳಿಸಿ ಅಮೋಘ ಸಾಧನೆ ಮಾಡಿದ ಗುರುವಾಯನಕೆರೆಯ ಕೊಂಟುಪಲ್ಕೆಯ ಕುಮಾರಿ ನಿಧಿತಾ ಬಂಗೇರ ಅವರನ್ನು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಗುರುವಾಯನಕೆರೆ ವತಿಯಿಂದ ಸನ್ಮಾನಿಸಲಾಯಿತು.


ಆನಂದ ಹಾಗೂ ಪ್ರತಿಮಾ ದಂಪತಿಗಳ ಪುತ್ರಿಯಾದ ನಿಧಿತಾ ಬಂಗೇರ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಕುಟುಂಬಕ್ಕೆ ಹಾಗೂ ಗುರುವಾಯನಕೆರೆ ಪರಿಸರಕ್ಕೆ ಹೆಮ್ಮೆ ತಂದಿದ್ದಾರೆ.
ನಿಧಿತಾ ಅವರ ಸಾಧನೆಯನ್ನು ಅಭಿನಂದಿಸಿದ ಸಮಿತಿ ಪದಾಧಿಕಾರಿಗಳು, ಅವರ ಮುಂದಿನ ವಿದ್ಯಾಭ್ಯಾಸ ಹಾಗೂ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.









