ಶೀಘ್ರದಲ್ಲಿ ಆರಂಭವಾಗಲಿರುವ ಸೋಜಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಸಂಸ್ಥೆಯ “ಆಕಾಶ್” ಮಾಸಿಕ ಉಳಿತಾಯ ಯೋಜನೆಗೆ ಮೊದಲ ಗ್ರಾಹಕರಾಗಿ ಫಾರೆಸ್ಟ್ ವಾಚರ್ ಅಶೋಕ್ ಕುಮಾರ್ ಎ. ಸೇರ್ಪಡೆ

0

ಬೆಳ್ತಂಗಡಿ : 32ನೇ ವರ್ಷಕ್ಕೆ ಯಶಸ್ವೀ ಪಾದಾರ್ಪಣೆಗೈಯುತ್ತಿರುವ ಸಂಭ್ರಮದಲ್ಲಿರುವ ಬೆಳ್ತಂಗಡಿ ತಾಲೂಕಿನ ಹೆಸರಾಂತ ಸೋಜಾ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ ಮಳಿಗೆ ಗ್ರಾಹಕರ ಬೇಡಿಕೆ ಮೇರೆಗೆ ಆಕಾಶ್ ಮಾಸಿಕ ಉಳಿತಾಯ ಯೋಜನೆಯನ್ನು ಪರಿಚಯಿಸುತ್ತಿದ್ದು, ಇದರ ಮೊದಲ ಗ್ರಾಹಕರಾಗಿ ಅರಣ್ಯ ಇಲಾಖೆಯ ಫಾರೆಸ್ಟ್ ವಾಚರ್ ಆಗಿರುವ ಅಶೋಕ್ ಕುಮಾರ್ ಎ. ಅವರು ಸೇರ್ಪಡೆಯಾಗಿದ್ದಾರೆ.

ಅ.10ರಿಂದ ಪ್ರಾರಂಭವಾಗುತ್ತಿರುವ ಆಕಾಶ್ ಮಾಸಿಕ ಉಳಿತಾಯ ಯೋಜನೆಗೆ ಈಗಾಗಲೇ ಒಳ್ಳೆಯ ಸ್ಪಂದನೆ ದೊರೆತಿದ್ದು, ಭಾರೀ ಗ್ರಾಹಕರು ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದು ಸೋಜಾ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ ಸಂಸ್ಥೆಯ ಮಾಲಕ ಅಲ್ಫೋನ್ಸ್ ಫ್ರಾಂಕೋ ತಿಳಿಸಿದರು.

ಈ ಸಂದರ್ಭದಲ್ಲಿ ಸೋಜಾ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ ಸಂಸ್ಥೆಯ ಮಾಲಕ ಅಲ್ಫೋನ್ಸ್ ಫ್ರಾಂಕೋ, ವ್ಯವಸ್ಥಾಪಕ ಲ್ಯಾನ್ಸಿ ಡಿಸೋಜಾ, ಪಿಆರ್‌ಒ ಅಮಿನಾ ಶಬಾನ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here