







ಬೆಳ್ತಂಗಡಿ: ಕರಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಅವರ ಅಧ್ಯಕ್ಷತೆಯಲ್ಲಿ ದಾನಿಯೊಬ್ಬರು ನಿರ್ಮಿಸಿಕೊಟ್ಟ ಶಾಲಾ ನೂತನ ಕೊಠಡಿ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಜರುಗಿತು.
ಇದೇ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರು ಕರಾಯ ಹಾಗೂ ಇಳಂತಿಲ ಗ್ರಾಮಗಳಲ್ಲಿ ಮಂಜೂರಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.೧.೫ ಕೋಟಿ ರೂ. ವೆಚ್ಚದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ವೀಕ್ಷಣೆ:ರಾಜ್ಯ ಸರ್ಕಾರದ ವಿಶೇಷ ಅನುದಾನದಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ವಿಶೇಷ ಶ್ರಮದಿಂದ ಮಂಜೂರಾದ ಒಟ್ಟು ೧.೫ ಕೋಟಿ ರೂ. ವೆಚ್ಚದ ಆರು ಪ್ರಮುಖ ರಸ್ತೆಗಳ ಕಾಂಕ್ರೀಟಿಕರಣ ಕಾಮಗಾರಿಯನ್ನು ಅವರು ನೇರವಾಗಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.ಕರಾಯ ಗ್ರಾಮದ ಕರಾಯ ಮೊದಲಗುಂಡಿ ರಸ್ತೆ (೨೫ ಲಕ್ಷ ರೂ.)ಕರಾಯ ಗ್ರಾಮದ ಕುವೆಲೆ ಕಡ್ತಿಮಾರ್ ರಸ್ತೆ (೨೫ ಲಕ್ಷ ರೂ.)ಕರಾಯ ಗ್ರಾಮದ ನೀಲಗಿರಿ ಕಲ್ಲಡೆ ರಸ್ತೆ (೨೫ ಲಕ್ಷ ರೂ.)ಕರಾಯ ಗ್ರಾಮದ ಮುಗ್ಗ ಹಿರ್ತಡ್ಕ ರಸ್ತೆ (೨೫ ಲಕ್ಷ ರೂ.)ಪಡ್ಡಾಯಬೆಟ್ಟು ಪಂ. ಜಾತಿ ಕಾಲೋನಿ ರಸ್ತೆ (೨೫ ಲಕ್ಷ ರೂ.)ಇಳಂತಿಲ ಗ್ರಾಮದ ಕರಾಯ ಬಣ್ಣೆಂಗಳ ರಸ್ತೆ (೨೫ ಲಕ್ಷ ರೂ.)— ಹೀಗೆ ತಲಾ ೨೫ ಲಕ್ಷ ರೂಪಾಯಿಯಂತೆ ಒಟ್ಟು ಆರು ರಸ್ತೆಗಳ ಕಾಮಗಾರಿಗಳನ್ನು ಪರಿಶೀಲಿಸಲಾಯಿತು.


ಶಿಕ್ಷಣ ಪ್ರೇಮಿ ಹಾಗೂ ದಾನಿಗಳಾದ ಶಶಿಧರ್ ಕಾಪಿಲಾಡ್ ಅವರು ಕರಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನಿರ್ಮಿಸಿಕೊಟ್ಟ ನೂತನ ಕೊಠಡಿಯನ್ನು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್ ಕರಾಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದಾನಿ ಶಶಿಧರ್ ಕಾಪಿಲಾಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, “ಕರಾಯ ಹಿರಿಯ ಪ್ರಾಥಮಿಕ ಶಾಲೆಯನ್ನು ಪಬ್ಲಿಕ್ ಸ್ಕೂಲ್ ಆಗಿ ಮೇಲ್ದರ್ಜೆಗೇರಿಸಬೇಕೆಂದು ಎಸ್ಡಿಎಂಸಿ ಹಾಗೂ ಊರಿನವರು ಬೇಡಿಕೆ ಇಟ್ಟಾಗ, ನಾನೇ ಖುದ್ದಾಗಿ ಎಸ್ಡಿಎಂಸಿ ಪದಾಧಿಕಾರಿಗಳು ಮತ್ತು ಸ್ಥಳೀಯರನ್ನು ಕರೆದುಕೊಂಡು ಹೋಗಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಆಯುಕ್ತರ ಮೂಲಕ ಇಲ್ಲಿಗೆ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಿಸಿಕೊಡಲಾಗಿದೆ” ಎಂದರು.
ಕೊಠಡಿ ಉದ್ಘಾಟಿಸಿ ಮಾತನಾಡಿದ ಶಾಹುಲ್ ಹಮೀದ್, “ಶಶಿಧರ್ ಕಾಪಿಲಾಡ್ ಅವರು ನಮ್ಮ ಶಾಲೆಗೆ ಕೊಠಡಿ ನಿರ್ಮಿಸಿಕೊಡುವ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಇವರ ಈ ಶ್ರಮ ಶ್ಲಾಘನೀಯ” ಎಂದರು.ಅಕ್ರಮ-ಸಕ್ರಮ ಸಮಿತಿ ಸದಸ್ಯ ಅಯ್ಯೂಬ್ ಕರಾಯ ಮಾತನಾಡಿ, “ಹರೇಕಲ ಹಾಜಬ್ಬ ಅವರು ಅಕ್ಷರ ಪ್ರೇಮಿಯಾದರೆ, ಶಶಿಧರ್ ಕಾಪಿಲಾಡ್ ಅವರು ಶಿಕ್ಷಣ ಪ್ರೇಮಿಯಾಗಿದ್ದು, ಇವರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯ ಜಯ ವಿಕ್ರಮ್, ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ, ಜಗದೀಶ್ ಶೆಟ್ಟಿ ಮೈರಾ, ಅನಂತಕೃಷ್ಣ ಕುದ್ದಣ್ಣಾಯ ಮುಂತಾದವರು ಶುಭ ಹಾರೈಸಿ ಮಾತನಾಡಿದರು. ವೇದಿಕೆಯಲ್ಲಿ ದುರ್ಗಾ ಪ್ರಸಾದ್ ಕೆ., ಲತೀಫ್ ಕರಾಯ, ಸ್ವಾದಿಕ್ ಕರಾಯ, ಶುಕೂರ್ ದಾರಿಮಿ, ಉದಯ ನಾಯ್ಕ, ಇಲ್ಯಾಸ್ ಕರಾಯ, ಅಶ್ರಫ್ ಎಂ., ಜಯರಾಮ್ ಆಚಾರ್ಯ, ಮುಹಮ್ಮದ್ ರಫೀಕ್ ಹಾಗೂ ಎಸ್ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕ ಮಹಾಲಿಂಗ ಕೆ. ಸ್ವಾಗತಿಸಿದರು, ಸಹಶಿಕ್ಷಕಿ ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ವತ್ಸಲಾ ಕೆ.ಆರ್. ವಂದಿಸಿದರು. ಸಹಶಿಕ್ಷಕಿಯರಾದ ಹಾಲಮ್ಮ, ನೈನಾ, ವಸಂತಿ ಬಿ. ಹಾಗೂ ಶ್ವೇತಾ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.









