ವಲಯ ಮಟ್ಟದ ಕ್ರೀಡಾಕೂಟ: ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ

0

ಪುಂಜಾಲಕಟ್ಟೆ: 2026-27ನೇ ಸಾಲಿನ ಪುಂಜಾಲಕಟ್ಟೆ ಹಾಗೂ ಕರಾಯ ವಲಯ ಮಟ್ಟದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಕೆಪಿಎಸ್ ಪುಂಜಾಲಕಟ್ಟೆ ಕ್ರೀಡಾಂಗಣದಲ್ಲಿ ನಡೆಯಿತು.

ಈ ಕೂಟದಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉರುವಾಲು ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆ:ಬಾಲಕರ ವಿಭಾಗ: 600 ಮೀ. ಓಟದಲ್ಲಿ ದಿಶಾನ್ ರೈ – ತೃತೀಯ, ಹರ್ಡಲ್ಸ್ ನಲ್ಲಿ ಮೊಹಮ್ಮದ್ ಶಮ್ಮಾಸ್ – ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ ಹಾಗೂ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ.

ಬಾಲಕಿಯರ ವಿಭಾಗ: ಗುಂಡೆಸೆತದಲ್ಲಿ ಸುನಿಧಿ – ತೃತೀಯ, ಹರ್ಡಲ್ಸ್ ನಲ್ಲಿ ಸ್ವಸ್ತಿ – ಪ್ರಥಮ, ಜಾನ್ವಿ – ತೃತೀಯ ಹಾಗೂ ಎತ್ತರ ಜಿಗಿತದಲ್ಲಿ ಧೃತಿ – ಪ್ರಥಮ ಸ್ಥಾನ ಪಡೆದಿದ್ದಾರೆ.ವಿಜೇತ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಕು. ಐಶ್ವರ್ಯ ಅವರಿಗೆ ಶಾಲಾ ಸೇವಾ ಸಮಿತಿ ಸದಸ್ಯರು, ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿ ಮಿತ್ರರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here