






ಉಜಿರೆ: ಉಪವಿಭಾಗದ ಕೊಕ್ಕಡ ಶಾಖಾ ವ್ಯಾಪ್ತಿಯ ಅರಿಸಿನಮಕ್ಕಿ-ಶಿಶಿಲ ರಸ್ತೆ ಅಗಲೀಕರಣ ಪ್ರಯುಕ್ತ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬ ಮತ್ತು ವಿದ್ಯುತ್ ಲೈನ್ ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.1ರ ಗುರುವಾರ ಧರ್ಮಸ್ಥಳ 33/11 ಕೆವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ನಿಡ್ಲೆ ಫೀಡರ್ನಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಬೂಡಮುಗೇರು ದೇವಸ್ಥಾನದಿಂದ ಶಿಶಿಲ ಗ್ರಾಮದವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.









