






ಬೆಳ್ತಂಗಡಿ: ತಾಲ್ಲೂಕಿನ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಕುಪ್ಪೆಟ್ಟಿ ವತಿಯಿಂದ ನಶಾ ಮುಕ್ತ ಭಾರತ, ಮಾದಕ ದ್ರವ್ಯ ವ್ಯಸನ ನಿಷೇಧ ಹಾಗೂ ತಂಬಾಕು ಮುಕ್ತ ಪ್ರದೇಶ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ಜಾಗೃತಿ ಜಾಥಾವನ್ನು ಆಯೋಜಿಸಲಾಯಿತು.


ಶಾಲಾ ಆವರಣದಿಂದ ಆರಂಭವಾದ ಜಾಥಾವು ಕುಪ್ಪೆಟ್ಟಿ ಪೇಟೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾದಕ ದ್ರವ್ಯ ಮತ್ತು ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಘೋಷಣೆಗಳನ್ನು ಕೂಗಿದರು.ಜಾಥಾದ ವೇಳೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು ಕುಪ್ಪೆಟ್ಟಿ ಪ್ರದೇಶದ ಅಂಗಡಿ ಮಾಲೀಕರಿಗೆ ತಂಬಾಕು ಹಾಗೂ ಇತರ ಮಾದಕ ವಸ್ತುಗಳನ್ನು ಮಾರಾಟ ಮಾಡದಂತೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಕುಪ್ಪೆಟ್ಟಿ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಸದಸ್ಯರು ಸಹ ಭಾಗವಹಿಸಿ ಜಾಗೃತಿ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು.









