ನಿಡಿಗಲ್ ಅಕ್ಷಯನಗರ ಸಂಭ್ರಮದ 27ನೇ ವರ್ಷದ ಆಟೋಟ ಸ್ಪರ್ಧೆ; ಪ್ರತಿಭಾವಂತ ವಿದ್ಯಾರ್ಥಿಗಳು, ಕ್ರೀಡಾ ಪ್ರತಿಭೆಗಳಿಗೆ ಸನ್ಮಾನ

0

ಕಲ್ಮಂಜ: ಗೆಳೆಯರ ಬಳಗ ಅಕ್ಷಯನಗರ ನಿಡಿಗಲ್ ಕಲ್ಮಂಜ ಇದರ ಆಶ್ರಯದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ದಿ. ಮಹಾವೀರ ಜೈನ್ ಹುಣಿಪ್ಪಾಜೆ ಗುತ್ತು ಇವರ ಸ್ಮರಣಾರ್ಥ 27ನೇ ವರ್ಷದ ಬೃಹತ್ ಆಟೋಟ ಸ್ಪರ್ಧೆಗಳು ಸೆ. 28 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಿದವು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭವನ್ನು ಹಿರಿಯರಾದ ಅಣ್ಣಿ ಪೂಜಾರಿ ಅಂಬಡೆದಡಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಕ್ರೀಡಾಧ್ಯಕ್ಷರಾದ ರವಿ ಟಿ. ಕಂದೂರು ಸಭಾಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಲ್ಮಂಜ ಸಮುದಾಯ ಆರೋಗ್ಯ ಅಧಿಕಾರಿ ಬಿ. ರಂಜಿತಾ, ಆಟೋ ಚಾಲಕರ ಸಂಘ ಉಜಿರೆ ಅಧ್ಯಕ್ಷ ಜಗನ್ನಾಥ ಪಾಣಿಯಾಲ್, ಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ಹೆಗ್ಡೆ, ಗ್ರಾ.ಪಂ ಸಿಬ್ಬಂದಿ ಶ ರಮೇಶ್ ಗೌಡ, ಊರ ಹಿರಿಯರಾದ ಜಿನ್ನಪ್ಪ ಪೂಜಾರಿ ಮತ್ತು ಮೋನಪ್ಪ ಟಿ. ಅಕ್ಷಯನಗರ ಉಪಸ್ಥಿತರಿದ್ದರು.ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಸುಬ್ರಾಯ ಅಕ್ಷಯನಗರ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರತ್ನಮಾನಸ ಉಜಿರೆಯ ನಿಲಯ ಪಾಲಕ ಯತೀಶ್ ಕೆ. ಬಳೆಂಜ, ಘಮಂತು ಕಾರ್ಯ ಸಂಯೋಜಕ ಮಂಗಳೂರು ವಿಭಾಗ ಸುದರ್ಶನ್ ಭಟ್ ಕನ್ಯಾಡಿ, ವೆಲಂಕಣಿ ಕ್ಯಾಟರರ್ಸ್ ಮಾಲಕ ಲ್ಯಾನ್ಸಿ ಮೋನಿಸ್, ಸಿವಿಲ್ ಗುತ್ತಿಗೆದಾರ ರಾಘವೇಂದ್ರ ಹೂಕ್ರೊಟ್ಟು, ಬದ್ರಿಯಾ ಜುಮ್ಮಾ ಮಸೀದಿ ನಿಡಿಗಲ್ ಪ್ರಧಾನ ಕಾರ್ಯದರ್ಶಿ ರಫೀಕ್ ನಿಡಿಗಲ್, ಗೆಳೆಯರ ಬಳಗದ ಸಂಚಾಲಕ ಶೀನ ಉಪಸ್ಥಿತರಿದ್ದರು.ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ನೂರಾರು ಸ್ಪರ್ಧಾಳುಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದ 17 ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ ನಮ್ಮೂರಿನ 12 ಯುವ ಪ್ರತಿಭೆಗಳನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.ಇದೇ ವೇಳೆ ಕಲ್ಮಂಜ ಗ್ರಾಮ ಪಂಚಾಯತ್ ವತಿಯಿಂದ ಗೆಳೆಯರ ಬಳಗಕ್ಕೆ ಕ್ರೀಡಾ ಪರಿಕರಗಳನ್ನು ವಿತರಿಸಲಾಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.

ಊರು-ಪರವೂರ ದಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ನೆಲ್ಸನ್ ಮೋನಿಸ್, ಅಶೋಕ ಬಳ್ಳಿದಡ್ಡ, ಯಶೋಧಾ ಕಾರ್ಯಕ್ರಮ ನಿರೂಪಿಸಿ ಚಿದಾನಂದ ಲಿಂಗಾಯತ ವಂದಿಸಿದರು.

LEAVE A REPLY

Please enter your comment!
Please enter your name here