ಪುದುವೆಟ್ಟು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

0

​ಪುದುವೆಟ್ಟು: ಪ್ರಸಿದ್ಧ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಜರುಗಲಿರುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸೆಪ್ಟೆಂಬರ್ 26, 2026ರ ಶನಿವಾರದಂದು ಶ್ರೀ ದೇವಿಯ ಸನ್ನಿಧಿಯಲ್ಲಿ ನೆರವೇರಿತು.​

ಈ ಬಾರಿಯ ನವರಾತ್ರಿ ಪೂಜೆಯು ಅಕ್ಟೋಬರ್ 11, 2026ರ ಆದಿತ್ಯವಾರದಿಂದ ಆರಂಭಗೊಂಡು ಅಕ್ಟೋಬರ್ 19, 2026ರ ಸೋಮವಾರದವರೆಗೆ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.​ಗಣ್ಯರ ಉಪಸ್ಥಿತಿ:ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕಿರಣ್ ಮೆಸ್ಕರ್ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.​

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬೊಮ್ಮಣ್ಣ ಗೌಡ ಮಠ, ಕಾರ್ಯದರ್ಶಿ ಸಂತೋಷ್ ಕೆ.ಸಿ., ಉಪಾಧ್ಯಕ್ಷರಾದ ಜನಾರ್ಧನ್ ಪೂಜಾರಿ, ಕೋಶಾಧಿಕಾರಿ ಸಾಜು ಕೆ.ಆರ್., ಸಮಿತಿ ಸದಸ್ಯರಾದ ಸೋಮನಾಥ ಗೌಡ, ನಾರಾಯಣ ನಾಯ್ಕ, ಹರಿಣಾಕ್ಷಿ, ವರಲಕ್ಷ್ಮಿ, ಪೂಜಾ ಸಮಿತಿ ಅಧ್ಯಕ್ಷರಾದ ಮೋಹಿನಿ, ಬೈಲುವಾರು ಸಮಿತಿಯ ವಿಠಲ ಪೂಜಾರಿ ಹಾಗೂ ಹಗೂಢ ಗಣ್ಯರು ಹಾಗೂ ಹತ್ತಿರದ ಊರುಗಳಿಂದ ಆಗಮಿಸಿದ್ದ ಭಕ್ತಾದಿಗಳು ಉಪಸ್ಥಿತರಿದ್ದು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here