ಅಳದಂಗಡಿಯ ಉದ್ಯಮಿ ಪ್ರಭಾಕರ್ ಶೆಟ್ಟಿ ನಿಧನ

0

ಬೆಳ್ತಂಗಡಿ: ಅಳದಂಗಡಿಯ ದೀಪಾ ಎಂಟರ್‌ಪ್ರೈಸಸ್‌ನ ಮಾಲಕ, ಸ್ಥಳೀಯ ಉದ್ಯಮಿ ಪ್ರಭಾಕರ್ ಶೆಟ್ಟಿ (54) ಅವರು ಅನಾರೋಗ್ಯದಿಂದ ನಿಧನರಾದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಸೆ. 26ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಅಳದಂಗಡಿಯಲ್ಲಿ ದೀಪಾ ಎಂಟರ್‌ಪ್ರೈಸಸ್ ನಡೆಸುತ್ತಿದ್ದ ಪ್ರಭಾಕರ್ ಶೆಟ್ಟಿ ಅವರು ಉದ್ಯಮದ ಜೊತೆಗೆ ಸ್ಥಳೀಯವಾಗಿ ಉತ್ತಮ ಪರಿಚಯ ಹೊಂದಿದ್ದರು.

ಮೃತರು ಪತ್ನಿ ಶಿವಾಶಿನಿ, ಪುತ್ರ ಪ್ರಸ್ತುತ್, ಪುತ್ರಿ ಪ್ರಸಿದ್ದಿ ಬಂಧು-ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here