






ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯ ವ್ಯಾಪ್ತಿಯ ಧರ್ಮಸ್ಥಳ ಅಟಲ್ ಜೀ ಸಭಾ ಭವನ, ವೇಣೂರು ದೇವಾಡಿಗರ ಸಭಾ ಭವನ, ಅಳದಂಗಡಿ ಸಮೃದ್ಧಿ ಕಾಂಪ್ಲೆಕ್ಷ್, ಮಡಂತ್ಯಾರು ಜೆರಾಲ್ಡ್ ಕೊರೆಯ ಮನೆ, ಉಜಿರೆ ಶಾರದಾ ಮಂಟಪ, ಬೆಳ್ತಂಗಡಿ ಉಪಗ್ರಹ ಶಾಖೆ ಮೊದಲಾದ ವಿವಿಧ ಕಡೆಗಳಲ್ಲಿ ಪ್ರತಿನಿಧಿಗಳ ಕ್ಲಸ್ಟರ್ ಸಭೆ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ಸಂತೋಷ್ ರೆಡ್ಡಿ ವಹಿಸಿ ಬೆಳ್ತಂಗಡಿ ಉಪಗ್ರಹ ಶಾಖೆಯ 19ನೇ ವಾರ್ಷಿಕೋತ್ಸವ ಆಚರಣೆಯ ಕುರಿತು ಮತ್ತು ಪ್ರತಿನಿಧಿಗಳಿಗೆ ಹಮ್ಮಿಕೊಂಡಿರುವ ಸ್ಪರ್ಧೆಗಳ ವಿವರ ನೀಡಿ ಹೊಸ ವಿಮಾ ಪಾಲಿಸಿಗಳ ಮಾಹಿತಿ ನೀಡಿದರು.
ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಎಂ. ವಿ. ಶೆಟ್ಟಿ, ಟಿ. ಡಿ. ರಾಘವೇಂದ್ರ, ಉದಯ ಶಂಕರ್, ಸಂದೀಪ್ ಅರಮನೆ, ವಿನಯ ಕುಮಾರ್ ಉಪಸ್ಥಿತರಿದ್ದು ಮಾಹಿತಿ ನೀಡಿದರು. ವಿವಿಧ ಕ್ಲಸ್ಟರ್ ಸಭೆಗಳಲ್ಲಿ ಆಯಾ ವ್ಯಾಪ್ತಿಯ ಪ್ರತಿನಿಧಿಗಳು ಭಾಗವಹಿಸಿದ್ದರು.









