






ಬೆಳಾಲು: ಮಾಯ ಸರ್ಕಾರಿ ಉನ್ನತೀಕರಿದ ಪ್ರಾಥಮಿಕ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಯ ಒಕ್ಕೂಟದ ನೇತೃತ್ವದಲ್ಲಿ ಸೆ-19ರಂದು ಶ್ರಮದಾನ ಮಾಡಿ ಶಾಲಾ ಪರಿಸರವನ್ನು ಸ್ವಚ್ಚಗೊಳಿಸಲಾಯಿತು.


ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲ್ಯಾನ್, ಸೇವಾಪ್ರತಿನಿಧಿ ಪ್ರಭಾವತಿ ಅವರ ನೇತೃತ್ವದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ,ಪೋಷಕರ ಸಹಕಾರದೊಂದಿಗೆ ಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಯಿತು.

ಅಲ್ಲದೆ ಶಾಲಾ ಕೈತೋಟವನ್ನು ಪುನರ್ರಚಿಸಲಾಯಿತು. ಒಕ್ಕೂಟದ ಈ ರೀತಿಯ ಸಹಕಾರಕ್ಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಧರ ಶಿಲ್ಪಿ, ಹಾಗೂ ಶಾಲೆಯ ಮುಖ್ಯ ಶಿಕ್ಷಕ ವಿಠಲ ಎಂ., ಅಧ್ಯಾಪಕರು ಕೃತಜ್ಞತೆ ಸಲ್ಲಿಸಿದರು.









