ಅರಫಾ ಸ್ಟಾರ್ ವತಿಯಿಂದ MPL ಲೀಗ್ ಪಂದ್ಯಾಟ

0

ಪುಂಜಾಲಕಟ್ಟೆ: ಅರಫಾ ಸ್ಟಾರ್ ವತಿಯಿಂದ ಸೆ. 20 ರಂದು MPL ಲೀಗ್ ಪಂದ್ಯವನ್ನು ಬಸವನಗುಡಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಯ ಮಾಲಕರಾದ ಅಲ್ಫೋನ್ಸ್ ಫ್ರಾಂಕೋರವರು ಭಾಗವಹಿಸಿದ್ದರು. ಇವರು ಪ್ರಥಮ ಮತ್ತು ದ್ವಿತೀಯ ಸ್ಥಾನದ ಟ್ರೋಫಿಯನ್ನು ಕೊಡುಗೆಯಾಗಿ ನೀಡಿದರು.

ಅತಿಥಿಗಳಾಗಿ ಹನೀಫ್ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಪುಂಜಾಲಕಟ್ಟೆ, ತಾಜುದ್ದೀನ್ ವಕೀಲರು ಮಂಗಳೂರು, ನಿರೂಪಕರಾಗಿ (MC) ಇಲ್ಯಾಝ್,ಮ್ಯಾನ್ ಆಫ್ ದಿ ಮ್ಯಾಚ್ ಕೊಡುಗೆಯನ್ನು ಬಿ.ಹೆಚ್. ಸ್ಕ್ರಾಪ್ ಮಾಲಕರಾದ ಸಾದಿಕ್ ಪಾಂಡವರಕಲ್ಲು ಇವರು ನೀಡಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಗ್ರೌ೦ಡ್ ನೀಡಿಸಹಕರಿಸಿದರು. ಸಲೀಂ ಹಾಗೂ ಸಲಾಂ ಬಸವನಗುಡಿ ತೀರ್ಪುಗಾರಾಗಿದ್ದರು. ಪ್ರಥಮ ಸ್ಥಾನವನ್ನು ಟಿ.ವಿ. ಕೆ. ತಲಪತಿ ತಂಡವು ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಸತ್ಯದೇವತೆ ಫ್ರೆಂಡ್ಸ್ ಸಾಲುಮರ ಇವರು ಪಡೆದುಕೊಂಡರು.

ವಿಶ್ವನಾಥ್ ಬಸವನಗುಡಿ, ರೌಫ್ ಪುಂಜಾಲಕಟ್ಟೆ, ಮುಂತಾದವರು ಭಾಗವಹಿಸಿದ್ದರು. ಇರ್ಷಾದ್ ಇವರ ವತಿಯಿಂದ ಕ್ರಿಕೆಟ್ ಪಂದ್ಯಾವನ್ನು ಆಯೋಜಿಸಲಾಗಿತ್ತು.ಆಫ್ರಿದ್ ಇವರು ಜೊತೆಗೂಡಿಕೊಂಡು ಪಂದ್ಯಾವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here