ಅಳದಂಗಡಿ ಗ್ರಾಮ ಪಂಚಾಯತ್‌ನಲ್ಲಿ ವಿಶೇಷ ಗ್ರಾಮ ಸಭೆ: ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಗೆ ವಿರೋಧ

0

ಅಳದಂಗಡಿ ಗ್ರಾಮ ಪಂಚಾಯತ್ ನಲ್ಲಿ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಕನೆಯ ಬಗ್ಗೆ ಗ್ರಾಮಸ್ಥರ ಅಕ್ಷೇಪ, ಸಲಹೆ ಸೂಚನೆ ಪಡೆಯಲು ವಿಶೇಷ ಗ್ರಾಮ ಸಭೆ ನಡೆಯಿತು.

ಸದರಿ ಸಭೆಯಲ್ಲಿ ಅರಣ್ಯಧಿಕಾರಿಯವರಾದ ಹರಿಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕಸಹಾಯಕ ಪೂವಪ್ಪ ಮಲೆಕುಡಿಯ, ಹಾಗೂ ಕಸ್ತೂರಿ ರಂಗನ್ ಅಧಿಸೂಚನೆಯ ಭಾದಿತ ಗ್ರಾಮ ವಾದ ಸುಲ್ಕೆರಿಮೋಗ್ರು ಗ್ರಾಮಸ್ಥರು ಹಾಜರಿದ್ದರು.ಮತ್ತು ಸದರಿ ಅಧಿಸೂಚನೆಯನ್ನು ತಿರಸ್ಕರಿಸುವಂತೆ ಪಂಚಾಯತ್ ಮುಖಾಂತರ ಸರಕಾರ ಕ್ಕೆ ಮನವಿ ಸಲ್ಲಿಸಿದರು. ಅ

ವರ ಮನವಿಯನ್ನು ಪಡೆದು ಕೊಂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರು ಗ್ರಾಮಸ್ಥರ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿ ಯವರ ಮುಖಾಂತರ ಸರಕಾರ ಕ್ಕೆ ಕಳುಹಿಸಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಿದರು.

LEAVE A REPLY

Please enter your comment!
Please enter your name here