ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೂ. 7.5 ಲಕ್ಷ ವಿದ್ಯಾರ್ಥಿ ವೇತನ ವಿತರಣೆ

0

ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಬೆಂಗಳೂರು ಇಂದಿರಾ ನಗರ ಹಾಗೂ ರೋಟರಿ ಸೇವಾ ಟ್ರಸ್ಟ್ , ಶ್ರಿ ಕೃಷ್ಣ ಪಡ್ವೆಟ್ನಾಯ ಪ್ರತಿಷ್ಠಾನ ಉಜಿರೆ ಇದರ ಜಂಟಿ ಆಶ್ರಯದಲ್ಲಿ ಸೆ. 19 ರಂದು ಕಾಶಿಬೆಟ್ಟು ಬಳಿ ಇರುವ ರೋಟರಿ ಭವನದಲ್ಲಿ ನಡೆದ ವಿದ್ಯಾದಾನ್ ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಸುಮಾರು 174 ವಿದ್ಯಾರ್ಥಿಗಳಿಗೆ 7.5 ಲಕ್ಷ ರೂ ಮೌಲ್ಯದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಕೆ.ವಿ.ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ರೋಟರಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಪ್ರತಾಪಸಿಂಹ ನಾಯಕ್ , ರೋಟರಿ ಜಿಲ್ಲೆ 3181 ಇದರ 28-29 ರ ಸಾಲಿನ ಗವರ್ನರ್ ಡಾ. ಸೂರ್ಯನಾರಾಯಣ ಕೆ. ರೋಟರಿ ಇಂದಿರಾ ನಗರ ಇದರ ಅಧ್ಯಕ್ಷ ಗೋಪೀನಾಥ್, ರೋಟರಿ ಜಿಲ್ಲೆವ3192 ಇದರ ಲೆಪ್ಟಿನೆಂಟ್ ಗವರ್ನರ್ ಜಗದೀಶ್ ಮುಗುಳಿ, ರೋಟರಿ ಜಿಲ್ಲೆ 3181 ಝೋನ್ 4 ಇದರ ಅಸಿಸ್ಟೆಂಟ್ ಗವರ್ನರ್ ಡಾ ಶಶಿಧರ ಡೋಂಗ್ರೆ, ರೋಟರಿ‌ ಜಿಲ್ಲೆ 3192 ಇದರ ಮಾಜೀ ಗವರ್ನರ್ ಸುರೇಶ್ ಹರಿ, ರೋಟರಿ ಬೆಂಗಳೂರು ಇಂದಿರಾ ನಗರ ಇದರ ಪೂರ್ವಾಧ್ಯಕ್ಷರಾದ ಪಿಯೂಶ್ ಜೈನ್, ಶ್ರೀ ಕೃಷ್ಣ ಪಡುವೆಟ್ನಾಯ ಪ್ರತಿಷ್ಠಾನ ಉಜಿರೆ ಇದರ ಅಧ್ಯಕ್ಷರಾದ ಶ್ರೀಧರ ಪಡ್ವೆಟ್ನಾಯ, ರೋಟರಿ ಕ್ಲಬ್ ಬೆಳ್ತಂಗಡಿ ಇದರ ಕಾರ್ಯದರ್ಶಿ ಡಾ.ರಾಘವೇಂದ್ರ ಪಿದಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಶ್ರೀಧರ ಕೆ.ವಿ. ಸ್ವಾಗತಿಸಿದರು , ಅತಿಥಿಗಳಾದ ಡಾ.ಸೂರ್ಯನಾರಾಯಣ ಕೆ, ಜಗದೀಶ್ ಮುಗುಳಿ, ಸುರೇಶ್ ಹರಿ, ಪ್ರತಾಪಸಿಂಹ ನಾಯಕ್ , ಗೋಪಿನಾಥ್ ,ಶ್ರೀಧರ ಪಡ್ವೆಟ್ನಾಯ ಅವರುಗಳು ಶುಭ ಹಾರೈಸಿದರು.

ಸಂಕೇತಿಕವಾಗಿ 10 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ವಿದ್ಯಾನಗರ ಇದರ ಸದಸ್ಯರುಗಳು ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸದಸ್ಯರುಗಳು ಹಾಗೂ ಬೇರೆ ಬೇರೆ ಕಾಲೇಜುಗಳ ಪ್ರಾಂಶುಪಾಲರುಗಳು, ಪ್ರಾಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.

ಸಂದೇಶ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಕಾರ್ಯದರ್ಶಿ ಡಾ.ರಾಘವೇಂದ್ರ ಪಿದಮಲೆ ವಂದಿಸಿದರು.

LEAVE A REPLY

Please enter your comment!
Please enter your name here