ಗೆಜ್ಜೆಗಿರಿ ದೇಯಿಬೈದೆತಿ ಆಯುರ್ವೇದ ಕಟ್ಟಡ ಕಾಮಗಾರಿ ಅನುದಾನಕ್ಕೆ ಸರಕಾರಕ್ಕೆ ಮನವಿ

0

ಬೆಳ್ತಂಗಡಿ: ಮಂಗಳೂರಿನ ತುಳು ಭವನದಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಗೆಜ್ಜೆಗಿರಿ ಕ್ಷೇತ್ರದ ಕಾನೂನು ಸಲಹೆಗಾರ ರಕ್ಷಿತ್ ಶಿವರಾಂ ಇವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ನಡೆಯುವ ದೇಯಿ ಬೈದೇತಿ ಆಯುರ್ವೇದಿಕ್ ಕೇಂದ್ರದ ಕಟ್ಟಡ ಕಾಮಗಾರಿಗೆ ಸರಕಾರದಿಂದ ಅನುದಾನ ನೀಡಲು ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಕಾರ್ಯದರ್ಶಿ ಡಾ. ರಾಜಾರಾಮ್ ಜೊತೆ ಕಾರ್ಯದರ್ಶಿ ಜಯ ವಿಕ್ರಮ ಕಲ್ಲಾಪು, ಕ್ಷೇತ್ರದ ವಕ್ತಾರ ರಾಜೇಂದ್ರ ಚೆಲಿಂಬಿ, ಹರೀಶ್ ಬೈಲಾಬರಿ, ವಕೀಲರಾದ ಎ. ಮನೋಹರ್, ಬೇಬಿ ಕುಂದರ್, ಪದ್ಮನಾಭ ಪೂಜಾರಿ ಹಾಗೂ ಇತರರು ಜೊತೆಗಿದ್ದರು.

LEAVE A REPLY

Please enter your comment!
Please enter your name here