







ಬೆಳ್ತಂಗಡಿ : ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026–27ನೇ ಸಾಲಿನ ರಕ್ಷಕ–ಶಿಕ್ಷಕ ಸಂಘದ ಸಾಮಾನ್ಯ ಸಭೆಯನ್ನು ಸೆ. 19 ರಂದು ಆಯೋಜಿಸಲಾಯಿತು. ಈ ಸಾಮಾನ್ಯ ಸಭೆಗೆ ಲೊರೆಟೊ ಸೆಂಟ್ರಲ್ ಸ್ಕೂಲ್, ಬಂಟ್ವಾಳದ ಪ್ರಾಂಶುಪಾಲ ಧರ್ಮಗುರು ಫಾದರ್ ಜೈಸನ್ ವಿಜಯ್ ಮೋನಿಸ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ಪೋಷಕರಿಗೆ ಮಕ್ಕಳ ಶಿಕ್ಷಣ, ಬೆಳವಣಿಗೆ ಹಾಗೂ ಉತ್ತಮ ಭವಿಷ್ಯಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು.
ಸಭೆಯಲ್ಲಿ 2026–27ನೇ ಸಾಲಿನ ರಕ್ಷಕ–ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಅಭಿನಂದನ್. ಎಚ್. ಹಾಗೂ ಉಪಾಧ್ಯಕ್ಷೆರಾಗಿ ಸವಿತಾ ರಮೇಶ್ ಶೆಟ್ಟಿ ಅವರು ಆಯ್ಕೆಯಾದರು.


ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ರೆವ. ಸಿಸ್ಟರ್ ಪ್ರೀತಿ ಜಾರ್ಜ್, ಶಾಲಾ ಸಂಚಾಲಕಿಯರಾದ ರೆವ. ಸಿಸ್ಟರ್ ಎಲ್ಸಿ ಪ್ಯಾಲೆಟ್, ರಕ್ಷಕ- ಶಿಕ್ಷಕರ ಸಮಿತಿಯ ಮಾಜಿ ಅಧ್ಯಕ್ಷ ರೆಜಿ ಜಾರ್ಜ್, ಉಪಾಧ್ಯಕ್ಷೆ ಸುಮಿತ ಫೆರ್ನಾಂಡಿಸ್, ಶಾಲಾ ಸಿಬ್ಬಂದಿ ಕಾರ್ಯದರ್ಶಿ ಲಾವಣ್ಯ , ಪೋಷಕರು ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಶಾಲಾ ಸಹ ಶಿಕ್ಷಕಿ ಮಮತಾ ಕಾರ್ಯಕ್ರಮವನ್ನು ನಿರೂಪಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ರೆವ. ಸಿಸ್ಟರ್ ಪ್ರೀತಿ ಜಾರ್ಜ್ ಗಣ್ಯರನ್ನು ಸ್ವಾಗತಿಸಿದರು, ಹಾಗೂ ಶಾಲಾ ಸಹ ಶಿಕ್ಷಕಿ ಪ್ರಮೀಳಾ ಶೆಟ್ಟಿ ವಂದಿಸಿದರು.









