ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಕಾರ್ಮಿಕರ ಸಂಘದ 3ನೇ ವಾರ್ಷಿಕ ಸಭೆ

0

ಬೆಳ್ತಂಗಡಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಕಾರ್ಮಿಕರ ಸಂಘದ ಮೂರನೇ ವಾರ್ಷಿಕ ಸಭೆ ಹಾಗೂ ವಿಶ್ವಕರ್ಮ ಜಯಂತಿ ಪ್ರಯುಕ್ತ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ, ಕ್ರೀಡಾ ಸಾಧಕರು ಹಾಗೂ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಾರ್ಮಿಕರ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಉಜಿರೆಯ ಶಾರದಾ ಮಂಟಪದಲ್ಲಿ ಸೆ.19 ರಂದು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಘುಪತಿ ಅವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಹರೀಶ್ ಪೂಂಜಾ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಅವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಅಪಘಾತ ವಿಮೆ ಮತ್ತು ಆರೋಗ್ಯ ವಿಮೆಯ ನೋಂದಣಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಕಾರ್ಮಿಕರು ಈ ನೋಂದಣಿಯ ಪ್ರಯೋಜನವನ್ನು ಪಡೆದುಕೊಂಡರು.ಇತ್ತೀಚೆಗೆ ಅಪಘಾತದಿಂದ ಮೃತರಾಗಿದ್ದ ಸದಾನಂದ ಗೌಡ ಗುರಿಪಳ್ಳ ಅವರ ಅಪಘಾತ ವಿಮಾ ಮೊತ್ತ 10 ಲಕ್ಷ ರೂಪಾಯಿಯ ಚೆಕ್ ಅನ್ನು ಮಾನ್ಯ ಶಾಸಕರಾದ ಹರೀಶ್ ಪೂಂಜಾ ಅವರು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಮಂಗಳೂರಿನ ಪ್ರಬಂಧಕರಾದ ಸುಬ್ರಹ್ಮಣ್ಯಂ ಅವರು ಹಾಗೂ ಸ್ಥಳೀಯ ಅಂಚೆ ಇಲಾಖೆಯ ಅಧಿಕಾರಿಗಳು ಮತ್ತು ಅಂಚೆ ನೌಕರರು ಭಾಗವಹಿಸಿದ್ದರು.

ದಯಾನಂದ ಕತ್ತಲ್ ಸಾರ್ ಅವರು ನೆರೆದಿದ್ದ ಕಾರ್ಮಿಕರಿಗೆ ಅಂಚೆ ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು. ರಬ್ಬರ್ ಮಂಡಳಿಯ ಫೀಲ್ಡ್ ಆಫೀಸರ್ ನಿಶಾಂತ್ ಅವರು ರಬ್ಬರ್ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಮತ್ತು ಕಾರ್ಮಿಕರ ‌ಕುಂದು ಕೊರತೆಗಳ ಬಗ್ಗೆ ಸಂವಾದ ನಡೆಸಿದರುಕಾರ್ಯಕ್ರಮದಲ್ಲಿ ವೈದ್ಯಕೀಯ ಸಹಾಯಧನ ಹಾಗೂ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಘಟನೆಗೆ ದನ್ಯವಾದ ಸಮರ್ಪಿಸಿದರು.

ಕಾರ್ಮಿಕರ ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಮಾಡಲಾಯಿತು.ರಬ್ಬರ್ ಮಂಡಳಿಯ ನಿರ್ದೇಶಕರಾದ ಮುಳಿಯ ಕೇಶವ ಭಟ್ ,ಬಿಎಂಎಸ್ ಬೆಳ್ತಂಗಡಿ ತಾಲೂಕು ಅದ್ಯಕ್ಷರಾದ ವಕೀಲರಾದ ಉದಯ ಬಿ.ಕೆಸಂಘದ ವಿವಿಧ ತಾಲೂಕು ಅದ್ಯಕ್ಷರಾದ ಪ್ರಕಾಶ್ ಉಜಿರೆ,ಶಶಿ ಕುಮಾರ್ ಸುಳ್ಯ,ಅಮ್ರತ ಲಿಂಗ ಪುತ್ತೂರು, .ಸ್ಠಾಲಿನ್ ಗುತ್ತಿಗಾರುಜೀವರಾಜ್ ಬಂಟ್ವಾಳ ,ತಿರುಪತಿ ಮರ್ದಾಳ ,ಅನಂದ ರಾಜ್ಗೌರವ ಸಲಹೆಗಾರರಾದ ನಾಗರಾಜ ಮಾಚಾರು, ರಾಜಾ ಮಾಚಾರು ಕೋಶಾಧಿಕಾರಿ ಅಯ್ಯಪ್ಪ ಉಪಸ್ಥಿತರಿದ್ದರುಕಾರ್ಯಕ್ರಮದಲ್ಲಿ ಸ್ವಾಗತವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ ನೇರೇವೆರಿಸಿ ಬಿಎಂಎಸ್‌ನ ರಾಜ್ಯ ಕಾರ್ಯದರ್ಶಿ ಎ. ಜೈ ರಾಜ್ ಸಾಲಿಯಾನ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ಧನ್ಯವಾದವನ್ನು ಮೋಹನ್ ಕುಮಾರ್ ಹಾಗೂ ನಿರೂಪಣೆಯನ್ನು ಜನಾರ್ದನ ಕಾನರ್ಪ ಅವರು ನೆರವೇರಿಸಿದರು.

LEAVE A REPLY

Please enter your comment!
Please enter your name here