ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ ರೂ.116 ಕೋಟಿ ವ್ಯವಹಾರ, ರೂ.47 ಲಕ್ಷ ನಿವ್ವಳ ಲಾಭ, ಸಂಘದ ಸದಸ್ಯರಿಗೆ 11 ಶೇಕಡಾ ಡಿವಿಡೆಂಡ್ : ಸಂಘದ ಅಧ್ಯಕ್ಷ ಹೆಚ್. ಪದ್ಮಗೌಡ

0

ಬೆಳ್ತಂಗಡಿ: ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ ಸಂಘದ ಅಧ್ಯಕ್ಷ ಹೆಚ್ ಪದ್ಮ ಗೌಡ ಅಧ್ಯಕ್ಷತೆಯಲ್ಲಿ ಸೆ.20 ರಂದು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆಯಿತು.

ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಹೆಚ್. ಪದ್ಮಗೌಡ ಅವರು ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ರೂ.116 ಕೋಟಿ ವ್ಯವಹಾರ ನಡೆಸಿ, ರೂ. 47 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 11 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.ಸಂಘವು ಪ್ರಧಾನ ಕಚೇರಿ ಸೇರಿದಂತೆ ಎರಡು ಶಾಖೆಗಳನ್ನು ಹೊಂದಿದ್ದು, ಕಳೆದ ಏಳು ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ‌.

ಮುಂದಿನ ದಿನಗಳಲ್ಲಿ ಇನ್ನೂ 2 ರಿಂದ 3 ಹೊಸ ಶಾಖೆಗಳನ್ನು ತೆರೆಯುವ ಚಿಂತನೆ ಇದ್ದು, ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಸಂಘವು ಲಾಭದ ಹಾದಿಯಲ್ಲಿದ್ದು, ಸದಸ್ಯರಿಗೆ ಉತ್ತಮ ಸೇವೆ ನೀಡಲು ಬದ್ಧವಾಗಿದೆ ಎಂದು ಹೇಳಿದರು.ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಮಾತನಾಡಿ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿ ಹಳೆಕೋಟೆಯಲ್ಲಿದ್ದು, ಸೋಮಂತಡ್ಕ ಹಾಗೂ ಕಲ್ಲೇರಿಯಲ್ಲಿ ಶಾಖೆಗಳನ್ನು ಹೊಂದಿದೆ.

ಸಂಸ್ಥೆಯು ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆಯುವ ಯೋಜನೆಯಲ್ಲಿದ್ದು, ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುವಲ್ಲಿ ವಾಣಿ ಸೌಹಾರ್ದ ಕೋ-ಆಪರೇಟಿವ್ ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ನಿರ್ದೇಶಕರಾದ ಗೋಪಾಲಕೃಷ್ಣ ಬಿ, ನಾರಾಯಣ ಗೌಡ, ಮಾಧವ ಗೌಡ, ಜಯಾನಂದ ಗೌಡ, ಯಶವಂತ ಬಿ.ಟಿ, ಸುರೇಶ್ ಬಿ, ಸುನೀಲ್ ಅಣವು, ಕೃಷ್ಣಪ್ಪ ಗೌಡ, ಪುರಂದರ ಗೌಡ, ಭವಾನಿ ಕೆ, ಉಷಾದೇವಿ ಬಿ, ಶ್ರೀನಾಥ್ ಕೆ.ಎಮ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ್ ಕುಮಾರ್ ಉಪಸ್ಥಿತರಿದ್ದರು.ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಸ್ವಾಗತಿಸಿ, ಸಿಬ್ಬಂದಿ ಚರಣ್ ಕುಮಾರ್ ತಿಳುವಳಿಕೆ ಪತ್ರ ಓದಿ ದಾಖಲು ಮಾಡಿದರು.

ಸಿಬ್ಬಂದಿ ನಿತೇಶ್ ಮಹಾಸಭೆಯ ನಡುವಳಿಕೆಗಳನ್ನು ಓದಿ ದಾಖಲಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ್  ಲೆಕ್ಕ ಪತ್ರ ವಾಚಿಸಿದರು. ನಿರ್ದೇಶಕ ಶ್ರೀನಾಥ್ ಕೆ.ಎಮ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here