






ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯ ಅಭಿವೃದ್ಧಿ ಅಧಿಕಾರಿ ಎಂ. ವಿ. ಶೆಟ್ಟಿ ಬಳಗದ ಪ್ರತಿನಿಧಿಗಳ ಸಭೆ ಮತ್ತು ವಿಮಾ ಕ್ಷೇತ್ರದಲ್ಲಿ ಸಾಧನೆ ಗೈದ ಪ್ರತಿನಿಧಿಗಳಿಗೆ ಗೌರವರ್ಪಣೆ ಸೆ. 19ರಂದು ಬೆಳ್ತಂಗಡಿj ಉಪಗ್ರಹ ಶಾಖೆಯಲ್ಲಿ ನಡೆಯಿತು.


ಉಡುಪಿ ವಿಭಾಗದ ಮೆನೇಜರ್ ಸೇಲ್ಸ್ ದುರ್ಗಾರಾಮ್ ಶೆಣೈ ವಿಶೇಷ ಅತಿಥಿಗಳಾಗಿ ಆಗಮಿಸಿ ಎಲ್ ಐ ಸಿ ಯ ವಿವಿಧ ಪಾಲಿಸಿಗಳ ಕುರಿತು ಮಾಹಿತಿ ನೀಡಿ ಸಾಧಕರನ್ನು ಗೌರವಿಸಿದರು.ಅಧ್ಯಕ್ಷತೆಯನ್ನು ಬೆಳ್ತಂಗಡಿ ಉಪಗ್ರಹ ಶಾಖೆಯ ಶಾಖಾಧಿಕಾರಿ ಸಂತೋಷ್ ರೆಡ್ಡಿ ವಹಿಸಿ ಹೊಸ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು.
ಅಭಿವೃದ್ಧಿ ಅಧಿಕಾರಿ ಎಂ. ವಿ. ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಹಿರಿಯ ಪ್ರತಿನಿಧಿ ಲೋಕೇಶ್ವರಿ ವಿನಯಚಂದ್ರ ಪ್ರತಿನಿಧಿಗಳ ಪರವಾಗಿ ಮಾತನಾಡಿದರು. ಕ್ಲಯ ಪ್ರತಿನಿಧಿ ಎ. ಎಸ್. ಲೋಕೇಶ್ ಶೆಟ್ಟಿ ವಂದಿಸಿದರು. ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದರು.









