






ಬೆಳ್ತಂಗಡಿ: ಕಳೆದ ಆರು ತಿಂಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 46 ವರ್ಷದ ಮಹಿಳೆಯ ಗರ್ಭಕೋಶದ ಅಪರೂಪದ 5 ಕೆ.ಜಿ. ತೂಕದ ಗೆಡ್ಡೆಯನ್ನು (ಸರ್ವಿಕಲ್ ಫೈಬ್ರಾಯ್ಡ್) ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ತೆಗೆದುಹಾಕಿದೆ.


ಹೊರರೋಗಿ ವಿಭಾಗದಲ್ಲಿ ಪರೀಕ್ಷಿಸಿದಾಗ ಗೆಡ್ಡೆಯು ಸಂಪೂರ್ಣ ಹೊಟ್ಟೆಯನ್ನು ಆವರಿಸಿರುವುದು ಕಂಡುಬಂದಿತ್ತು.
ಹೆರಿಗೆ ಮತ್ತು ಪ್ರಸೂತಿ ತಜ್ಞರಾದ ಡಾ. ವೆಂಕಟಸ್ವಾಮಿ, ಡಾ. ರಶ್ಮಿ, ಅರವಳಿಕೆ ತಜ್ಞ ಡಾ. ಶಶಾಂಕ್ ಕಾಂಬ್ಳೆ, ಶಸ್ತ್ರಚಿಕಿತ್ಸಾ ತಜ್ಞ ಡಾ. ರಾಘವೇಂದ್ರ ಹಾಗೂ ಆಸ್ಪತ್ರೆ ಸಿಬ್ಬಂದಿ ಒಳಗೊಂಡ ತಂಡ ತಾಲೂಕು ಮಟ್ಟದಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಮಹಿಳೆಯ ಆರೋಗ್ಯ ಉತ್ತಮವಾಗಿದೆ.









