ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆರೂ.126 ಕೋಟಿ ವ್ಯವಹಾರ, ರೂ.32.59 ಲಕ್ಷ ಲಾಭ  ಶೇ. 7% ಡಿವಿಡೆಂಡ್:ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್

0

ತೆಕ್ಕಾರು : ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಅಬ್ಧುಲ್ ರಝಾಕ್ ಬಿ. ಅಧ್ಯಕ್ಷತೆಯಲ್ಲಿ ತೆಕ್ಕಾರು ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೆ. 12 ರಂದು ನಡೆಯಿತು.

ಸಂಘದ ಅಧ್ಯಕ್ಷ ಅಬ್ಧುಲ್ ರಝಾಕ್  ಬಿ. ಮಾತನಾಡಿ ಸಮಾನ ಮಾನಷ್ಕರ ನಮ್ಮ ಸಂಘವು 126 ಕೋಟಿ ರೂ. ವ್ಯವಹಾರ ನಡೆಸಿ, ರೂ. 32,59 ಲಕ್ಷ ರೂ. ಲಾಭಗಳಿಸಿ, ಲೆಕ ಪರಿಶೋಧನೆಯಲ್ಲಿ ಎ ಗ್ರೇಡ್ ಪಡೆದಿದ್ದು ಸದಸ್ಯರಿಗೆ ಶೇ. 7% ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಶೇಖರ ಪೂಜಾರಿ, ನಿದೇರ್ಶಕರಾದ ಅಬ್ದುಲ್ ರಹಿಮಾನ್, ಅಬ್ದುಲ್ ಮುನೀರ್, ಎಸ್. ಬಿ. ಇಬ್ರಾಹಿಂ, ಕೃಷ್ಣಪ್ಪ ಮೂಲ್ಯ, ರವಿ, ವಸಂತಿ, ರಾಜೇಶ್ವರಿ ರಮೇಶ್, ಜಿನತ್ ಮತ್ತು ವಲಯ ಮೇಲ್ವಿಚಾರಕ ಸಿರಾಜುದ್ದಿನ್ ಉಪಸ್ಥಿತರಿದ್ದರು.ಐದು ಮಂದಿಗೆ ಸೌಭಾಗ್ಯ ನಿಧಿ ಠೇವಣಿಯನ್ನು  ವಿತರಿಸಲಾಯಿತು.ವಿವಿಧ ಕ್ಷೇತ್ರದ ಸಾಧಕರಿಗೆ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿಧನರಾದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಮುಖ್ಯ ಕಾರ್ಯನಿರ್ವಾಹಧಿಕಾರಿ ರಾಘವೇಂದ್ರ ಅಡಪ ವರದಿ ವಾಚಿಸಿ, ನಿರ್ದೇಶಕರಾದ ಇನಾಸ್ ರೋಡ್ರಿಗಸ್ ಸ್ವಾಗತಿಸಿ, ಸತೀಶ್ ಪೂಜಾರಿ ಬಿ. ನಿರೂಪಿಸಿದರು. ಸಿಬ್ಬಂದಿ ನಮಿತಾ ವಂದಿಸಿದರು. ಸಿಬ್ಬಂದಿಗಳಾದ ಪ್ರೇಮಾ, ನವೀಶ, ಶಾಹಿದಾ ಬಾನು, ನಿಕ್ಷಿತ್, ರತ್ನ ಸಹಕರಿಸಿದರು.

LEAVE A REPLY

Please enter your comment!
Please enter your name here