ಮಡಂತ್ಯಾರು: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ

0

ಮಡಂತ್ಯಾರು: ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ ವತಿಯಿಂದ 37ನೇ ವರ್ಷದಮೊಸರು ಕುಡಿಕೆ ಉತ್ಸವ ಸೆ.5ರಂದು ಗಣಪತಿ ಮಂಟಪದ ಸಿಂಧೂರ ವೇದಿಕೆಯಲ್ಲಿ ನಡೆಯಿತು.

ಪುಂಜಾಲಕಟ್ಟೆ ಅಕ್ಷಯ ಫುಡ್ಸ್ ಮಾಲಕ ಜಿ. ವಾಸುದೇವ ಗೌಡ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಕಲೇಶಪುರ ಹಾನ್‌ಬಾಳ್ ಚಿಕ್ಕಿ ಸಂಸ್ಥೆಯ ಮಾಲಕ ರವಿತೇಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಸಂತಿ ಮಚ್ಚಿನ, ನೂತನ್ ಕ್ಲಾತ್ ಸೆಂಟರ್ ಮಾಲಕ ರಾಜೇಶ್ ವಿನಯ್ ರೋಡ್ರಿಗಸ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು.

ದ.ಕ. ಜಿಲ್ಲಾ ಅಡಿಕೆ ವರ್ತಕರ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್‌ ಶೆಟ್ಟಿ, ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸುರೇಶ್ ಸಾಲ್ಯಾನ್, ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಜನ್ಮಾಷ್ಟಮಿ ಸಮಿತಿ ಗೌರವಾಧ್ಯಕ್ಷ ಬಿ. ಪದ್ಮನಾಭ ಸುವರ್ಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸ್ಥಾಪಕ ಅಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ ಕೋಶಾಧಿಕಾರಿ ನಿಖಿಲ್ ಕುಮಾರ್ ದೋಟ ಉಪಸ್ಥಿತರಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಪ್ರಶಾಂತ್ ಎಂ. ಪಾರೆಂಕಿ ಸ್ವಾಗತಿಸಿ, ಕಾರ್ಯದರ್ಶಿ ಶರತ್ ಗೌಡ ಹಟ್ಟತೋಡಿ ವಂದಿಸಿದರು.

ದಿನಪೂರ್ತಿ ಸಾರ್ವಜನಿಕರಿಗೆ, ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮುದ್ದು ಕೃಷ್ಣ ಸ್ಪರ್ಧೆ, ರೀಲ್ಸ್ ಸ್ಪರ್ಧೆ, 50ಕ್ಕೂ ಹೆಚ್ಚು ಬೈಕ್‌ಗಳು ಭಾಗವಹಿಸಿದ್ದ ಬೈಕ್ ರೇಸ್, ಗೋವಿಂದ ಸ್ಪರ್ಧೆ, ಶ್ರೀಕೃಷ್ಣನ ವೈಭವದ ಮೆರವಣಿಗೆ ಹಾಗೂ ಸಾಯಂಕಾಲ ಮಕ್ಕಳ ಯಕ್ಷಗಾನ ‘ಶ್ರೀ ಕೃಷ್ಣ ಲೀಲೆ’ ಪ್ರದರ್ಶನಗೊಂಡಿತು.

ವಿವಿಧ ಕ್ಷೇತ್ರಗಳ ಸಾಧಕರಾದ ಮೋಕ್ಷ ವಿ. ಪೂಜಾರಿ, ಡಾ. ಕರುಣಾಕರ್ ಶೆಟ್ಟಿ, ಚಿತ್ತರಂಜನ್, ಕಿಶೋರ್ ಶೆಟ್ಟಿ, ಶಶಿಧರ್ ಸಾಲಿಯನ್, ನವೀನ್ ಅವರನ್ನು ಸನ್ಮಾನಿಸಲಾಯಿತು

LEAVE A REPLY

Please enter your comment!
Please enter your name here