







ಮರೋಡಿ: ಕೂಕ್ರಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 25 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.13 ಮತ್ತು 14ರಂದು ಮರೋಡಿ ಕೂಕ್ರಬೆಟ್ಟು ವಠಾರದಲ್ಲಿ ನಡೆಯಲಿದೆ.
ಸೆ.13ರಂದು ಬೆಳಿಗ್ಗೆ 9 ಗಂಟೆಗೆ ಗಣಹೋಮ, ದೇವತಾ ಪ್ರಾರ್ಥನೆ ಮತ್ತು ಆಟೋಟ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ 10ರಿಂದ ವಾಲಿಬಾಲ್ ಪಂದ್ಯಾಟ ನಡೆಯಲಿದ್ದುಸಂಜೆ 6 ರಿಂದ ಶ್ರೀ ಉಮಾಮಹೇಶ್ವರ ಚಿಕ್ಕ ಮೇಳ ಮರೋಡಿ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶ್ರೀರಾಮ ದರ್ಶನ ಕನ್ನಡ ಪೌರಾಣಿಕ ಯಕ್ಷಗಾನ ನಡೆಯಲಿದೆ.


ರಾತ್ರಿ 10ರಿಂದ ಮಲ್ಲಿಗೆ ಐತಾ ಕೈಟ್ ಬೆತ್ತ, ಮಣಿಗಂಟೆ ಶಬ್ದಡ್ ಜನಮಾನಿಗ್ ನಿರೆಲಾಯಿ ಅಪ್ಪೆ ಮಂತ್ರದೇವತೆನ ಕಥೆ ನಡೆಯಲಿದೆ.ಸೆ.14ರಂದು ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠೆ, ಗಣಯಾಗ, ಬೆಳಿಗ್ಗೆ 10ರಿಂದಆಹ್ವಾನಿತ ತಂಡಗಳ ಪುರುಷರ ವಾಲಿಬಾಲ್ ಪಂದ್ಯಾಟ ಹಾಗೂ ಆಹ್ವಾನಿತ ತಂಡಗಳ ಮಹಿಳೆಯರ ತ್ರೋಬಾಲ್ ಪಂದ್ಯಾಟ ನಡೆಯಲಿದೆ. ನಂತರ ಆಹ್ವಾನಿತ ತಂಡಗಳ ಗ್ರಾಮ ಸೀಮಿತ ಕಬ್ಬಡಿ ಪಂದ್ಯಾಟ ನಡೆಯಲಿದೆ.ರಾತ್ರಿ 8ರಿಂದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ನಿರ್ಮಿಸಿರುವ ಶಾಸಕರ ಅನುದಾನದ ಶಾಶ್ವತ ಸಭಾ ಚಪ್ಪರದ ಸಮರ್ಪಣಾ ಕಾರ್ಯಕ್ರಮ ಹಾಗೂ ತ್ರಿ ಸಿದ್ದಿವಿನಾಯಕ ಕಲಾ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಪೂರ್ವಾಹ್ನ ಗಂಟೆ 11 ರಿಂದ ಭಜನಾ ಕಾರ್ಯಕ್ರಮ, ಭಕ್ತಿ ರಸಮಂಜರಿ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆನಡೆಯಲಿದೆ. ಮಧ್ಯಾಹ್ನ ತರಿಂದ ಛದ್ಮವೇಷ ಸ್ಪರ್ಧೆ ಹಾಗೂ ಆಹ್ವಾನಿತ ತಂಡಗಳ ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದೆ. ಸಂಜೆ 6-30ರಿಂದ ಬಹುಮಾನ ವಿತರಣೆ ನಡೆಯಲಿದೆ.
ಸಂಜೆ 7 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಭಕ್ತಿ ಪ್ರಧಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9-30ರಿಂದ ಸುಡುಮದ್ದ ಪ್ರದರ್ಶನ ಹಾಗೂ ರಾತ್ರಿ ಗಂಟೆ 10ರಿಂದ ಶೋಭಾಯಾತ್ರೆ ಹಾಗೂ ಗಣಪತಿಯ ವಿಗ್ರಹ ವಿಸರ್ಜನೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ವಿಶು ಕುಮಾರ್ ಜೈನ್ ವಿನಂತಿಸಿದ್ದಾರೆ.









