ಉಜಿರೆ, ಲಾಯಿಲ ಪಂಚಾಯಿತಿ ಲೋಕಾಯುಕ್ತ ಪರಿಶೀಲನೆ

0

ಬೆಳ್ತಂಗಡಿ: ಉಜಿರೆ ಹಾಗೂ ಲಾಯಿಲ ಗ್ರಾಮ ಪಂಚಾಯಿತಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸೆ. 9 ರಂದು ಭೇಟಿ ನೀಡಿ, ಪಂಚಾಯಿತಿ ಕಚೇರಿಯಲ್ಲಿರುವ ಕಡತಗಳು ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಲೋಕಾಯುಕ್ತ ಕೇಂದ್ರ ಕಚೇರಿಗೆ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ತನಿಖೆಯ ಮುಂದುವರಿದ ಭಾಗವಾಗಿ ಈ ದಿಢೀ‌ರ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಗ್ರಾಮ ಪಂಚಾಯಿತಿ ಗಳಲ್ಲಿನ ಆಡಳಿತಾತ್ಮಕ ದಾಖಲೆಗಳು, ಕಡತಗಳು ಹಾಗೂ ಸಂಬಂಧಿತ ವಿಚಾರಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಲಾಯಿಲ ಗ್ರಾಮ ಪಂಚಾಯಿತಿಗೆ ಉಡುಪಿ ಜಿಲ್ಲೆಯ ಲೋಕಾಯುಕ್ತ ವಿಭಾಗದ ಡಿವೈಎಸ್‌ ಪಿ ಹಾಲಮೂರ್ತಿ ಅವರ ನೇತೃತ್ವದಲ್ಲಿ ನಾಗರಾಜ್‌ ಸನಿಲ್, ಪ್ರಸನ್ನ, ಅಬ್ದುಲ್ ಜಲಾಲ್,ಸುದೀಪ್ ಅವರ ತಂಡ ಆಗಮಿಸಿತು. ಉಜಿರೆ ಗ್ರಾಮ ಪಂಚಾಯತಿಗೆ ಉಡುಪಿ ಜಿಲ್ಲೆಯ ಲೋಕಾಯುಕ್ತ ವಿಭಾಗದ ಇನ್ಸ್‌ ಪೆಕ್ಟರ್‌ ಮಂಜುನಾಥ್ ಶಂಕರಹಳ್ಳಿ ಅವರ ನೇತೃತ್ವದಲ್ಲಿ ರಾಘವೇಂದ್ರ ಸಾಲಿಗ್ರಾಮ, ಆದರ್ಶ್, ಅರುಣ್‌ ಕುಮಾ‌ರ್ ಹಾಗೂ ಸೂರಜ್ ಕಾವು ಅವರನ್ನೊಳಗೊಂಡ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿತು.

ಸೆ. 8 ರಂದು ಮಡಂತ್ಯಾರು ಹಾಗೂ ಕುವೆಟ್ಟು ಪಂಚಾಯಿತಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

LEAVE A REPLY

Please enter your comment!
Please enter your name here