







ಪುತ್ತೂರು: ಕಳೆದ ಹಲವು ವರ್ಷಗಳ ಅವಧಿಯಲ್ಲಿ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿ ಇದೀಗ ಸರಕಾರ ಅಕ್ಟೋಬರ್ನಲ್ಲಿ ನಡೆಸಲು ಉದ್ದೇಶಿಸಿರುವ PSTR/GPSTR/HSTR ನೇಮಕಾತಿಗೆ ಪೂರಕವಾಗಿ ತರಬೇತಿ ಪ್ರಾರಂಭಿಸಿದೆ.
ಇದೀಗ ಅಂತಿಮ ಹಂತದ ತರಬೇತಿ ಆಯೋಜಿಸಿದ್ದು ತರಬೇತಿಯನ್ನು ಆನ್ಲೈನ್ ಮೂಲಕ ವಿದ್ಯಾಮಾತಾ ಅಕಾಡೆಮಿ ನೀಡಲಿದ್ದು ಪರೀಕ್ಷೆ ಎದುರಿಸಲಿರುವ ಅಭ್ಯರ್ಥಿಗಳು ಈ ತರಗತಿಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು.800ಕ್ಕೂ ಅಧಿಕ ಅಭ್ಯರ್ಥಿಗಳನ್ನು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಿದ ಹೆಗ್ಗಳಿಕೆಯೊಂದಿಗೆ ತರಬೇತಿ ಆಯೋಜಿಸಿರುವ ವಿದ್ಯಾಮಾತಾದಲ್ಲಿ ಕಳೆದ ಸಾಲಿನ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆದ 5 ವಿದ್ಯಾರ್ಥಿಗಳು GPSTR ನೇಮಕಾತಿಯಲ್ಲಿ ಉತ್ತೀರ್ಣರಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.


2026ರ ಅಕ್ಟೋಬರ್ 4 ರಂದು ನಡೆಯಲಿರುವ ಈ ಪರೀಕ್ಷೆಗೆ ವಿದ್ಯಾಮಾತಾ ಅಕಾಡೆಮಿ ಆಯೋಜಿಸಿರುವ ಈ ಕ್ರ್ಯಾಶ್ ಕೋರ್ಸ್ ರಾತ್ರಿ ಸಮಯ 8ರಿಂದ 10 ರವರೆಗೆ, ನಡೆಯಲಿದೆ. ಅಲ್ಲದೆ ಪ್ರತೀ ಶನಿವಾರ ವಿಶೇಷ ನೇರ ತರಗತಿಯನ್ನು ಸಹ ಆಯೋಜಿಸಿದ್ದು ಈ ತರಗತಿಗಳು ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ನಡೆಯುತ್ತದೆ.
PSTR/GPSTR/HSTR ನೇಮಕಾತಿಗೆ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ 25.09.2025ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ ಸರಕಾರಿ ಶಿಕ್ಷಕರಾಗುವ ಕನಸನ್ನು ನನಸು ಮಾಡಿಕೊಳ್ಳಲು ಸೂಕ್ತ ಅವಕಾಶವಾಗಿದೆ.ವಿದ್ಯಾಮಾತಾ ಅಕಾಡೆಮಿ ಆಯೋಜಿಸಿರುವ ಈ ಕ್ರ್ಯಾಶ್ ಕೋರ್ಸ್ ಆನ್ಲೈನ್ ಲೈವ್ ರಾತ್ರಿ ಸಮಯ 7 ರಿಂದ 10 ರವರೆಗೆ ನಡೆಯಲಿದೆ. ಅಲ್ಲದೆ ಪ್ರತೀ ಆದಿತ್ಯವಾರ ವಿಶೇಷ ನೇರ ತರಗತಿಯನ್ನು ಸಹ ಆಯೋಜಿಸಿದ್ದು ಈ ತರಗತಿಗಳು ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ನಡೆಯುತ್ತದೆ ಆಸಕ್ತ ಅಭ್ಯರ್ಥಿಗಳು ಕೂಡಲೇ ಪುತ್ತೂರಿನ ಎಪಿಯಂಸಿ ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕಛೇರಿ ಸಂಖ್ಯೆ 9945182516/ 9620468869 ಸಂಪರ್ಕಿಸಿ ದಾಖಲಾತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.









