






ಬೆಳ್ತಂಗಡಿ : ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ. 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಯಿತು. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಗೌರವ ಸಮರ್ಪಣೆ ಮಾಡಲಾಯಿತು.
ವಿದ್ಯಾರ್ಥಿಗಳಾದ ರಿತಿಕ್ ಶೆಟ್ಟಿ ಮತ್ತು ರಿಯೋನ ಸೀಕ್ವೆರಾ ಶಿಕ್ಷಕರ ದಿನಾಚರಣೆ ಮಹತ್ವವನ್ನು ತಿಳಿಸಿದರು. ಶಾಲಾ ಸಂಚಾಲಕ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋ ರವರು ಶಿಕ್ಷಕ ವೃಂದದವರಿಗೆ ಉಡುಗೊರೆಯನ್ನು ನೀಡಿ ಶುಭವನ್ನು ಹಾರೈಸಿದರು.


ಶಾಲಾ ಮುಖ್ಯೋಪಾಧ್ಯಾಯ ಫಾ ಕ್ಲಿಫರ್ಡ್ ಪಿಂಟೋರವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಪ್ರಿಯಾ ಲೋಬೊ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಹಲವು ಅದೃಷ್ಟ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
2025-26ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ರಾಜ್ಯ ಮಟ್ಟದಲ್ಲಿ ಹತ್ತನೇ ಶ್ರೇಣಿ ಪಡೆದ ಹೆಮ್ಮೆಯ ವಿದ್ಯಾರ್ಥಿ ಸುಧನ್ವ ಎ ಆರ್ ರವರನ್ನು ಅಭಿನಂದಿಸಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿಗಳು ನಟನೆ, ನೃತ್ಯಗಳ ಮೂಲಕ ಎಲ್ಲರ ಮನ ರಂಜಿಸಿದರು.
ಶುಭಾಶಯ ಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳಾದ ಜೆನಿಶಾ ವೇಗಸ್ ಸ್ವಾಗತಿಸಿ, ಅರ್ವಿನ್ ಬೆನ್ನಿಸ್ ವಂದಿಸಿದರು. ಲಹರಿ , ಹಿಶಾನ ಮತ್ತು ಶ್ರಾವಣಿ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಬ್ಲೆಂಡಿನ್ ರೊಡ್ರಿಗಸ್ ಮತ್ತು ಸರಿತಾ ರೊಡ್ರಿಗಸ್ ಸಹಕರಿಸಿದರು.









