






ಬೆಳ್ತಂಗಡಿ: ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ವತಿಯಿಂದ ಸೆ. 5 ರಂದು ಬೈಂದೂರಿನಲ್ಲಿ ಚಾತುರ್ಮಾಸ ವ್ರತದಲ್ಲಿ ನಿರತರಾಗಿರುವ ಶ್ರೀರಾಮ ಕ್ಷೇತ್ರ ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದರ್ಶನ ಹಾಗೂ ಆಶೀರ್ವಾದ ಪಡೆಯುವ ಸಲುವಾಗಿ ‘ಯುವ ಬಾಂಧವ್ಯ’ ಒಂದು ದಿನದ ಪಯಣವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಘಟಕದ ಅಧ್ಯಕ್ಷೆ ಲೀಲಾವತಿ ಪಣಕಜೆ ಅವರ ನೇತೃತ್ವದಲ್ಲಿ ನಡೆದ ಈ ಪಯಣದಲ್ಲಿ ಒಟ್ಟು 33 ಜನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬೈಂದೂರಿನಲ್ಲಿ 48 ದಿನಗಳ ಚಾತುರ್ಮಾಸ ವ್ರತವನ್ನು ಆಚರಿಸುತ್ತಿರುವ ಶ್ರೀರಾಮ ಕ್ಷೇತ್ರ ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಗುರುಪೂಜೆ ಸಲ್ಲಿಸಿ, ಕೃಪಾಶೀರ್ವಾದವನ್ನು ಪಡೆಯಲಾಯಿತು.


ಬಳಿಕ ಘಟಕದ ಯುವ ಭಜಕರ ತಂಡದಿಂದ ವಿಶೇಷ ಭಜನಾ ಸೇವೆಯನ್ನು ಸಮರ್ಪಿಸಲಾಯಿತು









