







ಬೆಳ್ತಂಗಡಿ: ತಾಲೂಕು ಟೈಲರ್ಸ್ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಬೆಳ್ತಂಗಡಿ ಲಯನ್ಸ್ ಸೇವಾ ಭವನದಲ್ಲಿ ಸೆ.5ರಂದು ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
2016ರಲ್ಲಿ ರೂ.4ಲಕ್ಷ ಪಾಲುಬಂಡವಾಳ ದೊಂದಿಗೆ 200ಸದಸ್ಯರಿಂದ ಪ್ರಾರಂಭಗೊಂಡ ಸಹಕಾರ ಸಂಘವು ಟೈಲರ್ಸ್ ಸಹಕಾರ ಸಂಘವು ಪ್ರಸ್ತುತ 1500 ಸದಸ್ಯರನ್ನೊಳಗೊಂಡು ರೂ.16ಲಕ್ಷ ಪಾಲುಬಂಡವಾಳ ದೊಂದಿಗೆ ರೂ.21ಕೋಟಿ ಠೇವಣಿ ಸಂಗ್ರಹಿಸಿ ಒಟ್ಟು 77 ಕೋಟಿ ವ್ಯವಹಾರ ವಹಿವಾಟು ನಡೆಸಿದ್ದು, ರೂ.22,48,000 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷರಾದ ವಲೇರಿಯನ್ ರೊಡ್ರಿಗಸ್ ತಿಳಿಸಿದರು.


ಸದಸ್ಯರಿಗೆ 16%ಡಿವಿಡೆಂಡ್ ಘೋಶಿಸಿದರು. ಪಿಗ್ಮಿ ಸಂಗ್ರಹಕರಾದ ಪ್ರಾನ್ಸಿಸ್ ಮೋರಸ್ , ಹರೀಶ್ ಹೆಗ್ಡೆ, ಸುಮತಿ, ವೆಂಕಪ್ಪ ಪೂಜಾರಿ ಇವರನ್ನು ಪ್ರೋತ್ಸಾಹದನ ನೀಡಿ ಗೌರವಿಸಲಾಹಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಲ್ಸನ್ ಜೋಯಲ್ ಮೋರಸ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಸಂಘದ ನಿರ್ದೇಶಕರಾದ ಎನ್. ವಸಂತ್, ವಲೇರಿಯನ್ ಪಾಯಿಸ್, ವಸಂತ ಪೂಜಾರಿ, ರಾಜು ಪೂಜಾರಿ, ಜೋಸೆಫ್ ಡಿ’ಸೋಜ, ಶಶಿಕಲಾ ಗೋಪಾಲ್, ಪಾರ್ವತಿ, ಉಷಾ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಕೆ. ಕುಶಾಲಪ್ಪ ಗೌಡ ಸ್ವಾಗತಿಸಿ, ನಿರ್ದೇಶಕ ಸದಾನಂದ ಶೆಟ್ಟಿ ವಂದಿಸಿದರು. ನಿರ್ದೇಶಕಿ ಶಾಂಭವಿ ಪಿ. ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.









