ಗೇರುಕಟ್ಟೆ ಪತಂಜಲಿ ಯೋಗ ಕೇಂದ್ರದಲ್ಲಿ ಶ್ರೀ ಕೃಷ್ಣ ಅಷ್ಟಮಿ ಆಚರಣೆ

0

ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಬೆಂಗಳೂರು(ರಿ )ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಬೆಳ್ತಂಗಡಿ ಕಳಿಯ- ಗೇರುಕಟ್ಟೆ ಶಾಖೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

ನಿತ್ಯ ಯೋಗ ತರಗತಿಯೊಂದಿಗೆ ಶ್ರೀ ಕೃಷ್ಣನ ಭಜನೆ, ವಿಷ್ಣು ನಮಸ್ಕಾರ ನಡೆಸಲಾಯಿತು. ಹಿರಿಯ ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ಶ್ರೀ ಕೃಷ್ಣನು ಜಗದ್ಗುರುವಾಗಿ ಜಗದೋದ್ಧಾರವನ್ನು ಮಾಡಿದ ಆದರ್ಶ ವ್ಯಕ್ತಿ. ಕರ್ತವ್ಯವನ್ನು ಮಾಡುವ ಬಗ್ಗೆ ಮಾತ್ರ ಆಸಕ್ತಿ ಹೊಂದಿ ಫಲಾಪೇಕ್ಷೆಯನ್ನು ಬಯಸಬೇಡಿ.

ಕರ್ಮವನ್ನು ಭಗವದರ್ಪಣ ಭಾವದಿಂದ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂಬ ಶ್ರೀ ಕೃಷ್ಣನ ಸಂದೇಶ ಅನುಕರಣೀವೆಂದರು.

ಸಹ ಶಿಕ್ಷಕ ಸುಕೇಶ,ಅಶೋಕ ಆಚಾರ್ಯ,ಶಿವಣ್ಣ, ಸಂಚಾಲಕರಾದ ವಿಜಯ, ವಕ್ತಾರರಾದ ಕೇಶವ,ಅರುಣಾ,ಭಾರತಿ ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಭಂಡಾರಿ ನಾಳ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here