ಚಿಬಿದ್ರೆ : ಲಾರಿ-ಬೈಕ್ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

0

ಬೆಳ್ತಂಗಡಿ: ಚಾರ್ಮಾಡಿ ಸಮೀಪದ ಚಿಬಿದ್ರೆ ಎಂಬಲ್ಲಿ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.​

ಚಾರ್ಮಾಡಿ ಮುಗುಳಿದಡ್ಡ ನಿವಾಸಿ ದಯಾನಂದ ಗೌಡ (45) ಮೃತ ದುರ್ದೈವಿ.​ಸೆಪ್ಟೆಂಬರ್ 3ರ ರಾತ್ರಿಯ ವೇಳೆ ಈ ದುರ್ಘಟನೆ ಸಂಭವಿಸಿದೆ. ತರಕಾರಿ ತುಂಬಿಕೊಂಡು ಬರುತ್ತಿದ್ದ ಈಚರ್ ಲಾರಿಗೆ ಇವರು ಚಲಾಯಿಸುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ದಯಾನಂದ ಗೌಡ ಅವರು ಸ್ಥಳದಲ್ಲೇ ಕೊನೆಯೆಳೆದಿದ್ದಾರೆ.

​ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here