






ಬೆಳ್ತಂಗಡಿ : ಸ್ಕೇ ಅಸೋಸಿಯೇಷನ್ ಆಫ್ ಕರ್ನಾಟಕ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸ್ಕೇ ಅಸೋಸಿಯೇಷನ್ ಸಹಾಯೋಗದಲ್ಲಿ ಮೂಡುಬಿದ್ರೆಯ ಬ್ರಹ್ಮಶ್ರೀ ಗುರು ನಾರಾಯಣ ಸಭಾಭವನದಲ್ಲಿ ಆ.31ರಂದು ನಡೆದ ನಡೆದ 19ನೇ ರಾಜ್ಯ ಮಟ್ಟದ ಸ್ಕೇ ಚಾಂಪಿಯನ್ಶಿಪ್ ಮತ್ತು ಆಯ್ಕೆ ಟ್ರಯಾಲ್ಸ್ ನಲ್ಲಿ 11 ವರ್ಷದ 30 ಕೆ.ಜಿ ವಿಭಾಗದ ಲೋಬಾ(ಟobಚಿ) ಸ್ಪರ್ಧೆಯಲ್ಲಿ ಉಸ್ಮಾನ್ ಆದಿಲ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.


ರೆನ್ಶಿ ಅಬ್ದುಲ್ ರೆಹಮಾನ್ ಅವರಿಂದ ತರಬೇತಿಯನ್ನು ಪಡೆಯುತ್ತಿರುವ ಇವರು ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕಕ್ಕಿಂಜೆಯ ಅಬ್ದುಲ್ ಜಲೀಲ್ ಹಾಗೂ ಸಮೀಮಾ ದಂಪತಿಯ ಪುತ್ರ.









