ಕುದ್ರಡ್ಕ ಶ್ರೀ ಮಹಾಗಣಪತಿ ಭಜನಾ ಮಂಡಳಿಯಲ್ಲಿ ರಕ್ಷಾ ಬಂಧನ ಆಚರಣೆ

0

ಕುದ್ರಡ್ಕ: ಶ್ರೀ ಮಹಾಗಣಪತಿ ಭಜನಾ ಮಂಡಳಿಯಲ್ಲಿ ಆ.29 ರಂದು ಭಜನಾ ಮಂದಿರದಲ್ಲಿ ರಕ್ಷಾ ಬಂಧನ ಆಚರಣೆ ನಡೆಯಿತು.ಮುಖ್ಯ ಅತಿಥಿಯಾಗಿ ಕೇಶವ ಎಂ.ಕೆ. ನೆರೋಳ್ಳುಪಲ್ಕೆ ಭಾಗವಹಿಸಿದ್ದರು.

ಗೌರವಾಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ರಕ್ಷಾ ಬಂಧನದ ಧಾರ್ಮಿಕ ಮಹತ್ವ ತಿಳಿಸಿದರು. ಬೆಳ್ತಂಗಡಿ ಕುಣಿತಾ ತರಬೇತುದಾರರ ತಂಡದ ಅಧ್ಯಕ್ಷ ಸಂದೇಶ್ ಮದ್ದಡ್ಕ ಅವರು ಭ್ರಾತೃತ್ವದ ಅಗತ್ಯತೆ ಕುರಿತು ಮಾತನಾಡಿದರು.

ಅಧ್ಯಕ್ಷ ವಸಂತ ಮಡಕ್ಕಿಲ, ಮಹಿಳಾ ಕುಣಿತ ಭಜನಾ ಮಂಡಳಿ ಅಧ್ಯಕ್ಷೆ ಪ್ರಮೀಳಾ ಕುದ್ರಡ್ಕ, ಪುರುಷೋತ್ತಮ ಶೆಟ್ಟಿ ಮಡಪ್ಪಾಡಿ, ಶಿವರಾಮ ಆಚಾರ್ಯ ಕುದ್ರಡ್ಕ, ಮೋಹನಂದ ಮಾನ್ಯ, ತರಬೇತುದಾರ ಆಕಾಶ್, ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಇದ್ದರು.ಕಾರ್ಯದರ್ಶಿ ಸಂಪತ್ ಪಿಜಕೂಡಂಗೆ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here