






ಸವಣಾಲು: ಹನ್ಯಾಡಿ ಪಲ್ಕೆ ಬಾಲಕೃಷ್ಣ ನಾಯ್ಕರ ಮನೆಯಲ್ಲಿ ಚಿರತೆ ಗಾಗಿ ಬೋನಿಡಲಾಗಿತ್ತು. ದನದ ಕೊಟ್ಟಿಗೆಯಲ್ಲಿ ಅರಣ್ಯ ಇಲಾಖೆಯವರು ಇಟ್ಟ ಬೋನಿಗೆ ಸೆ.1ರಂದು ಮುಂಜಾನೆ 3.15ಕ್ಕೆ ಚಿರತೆ ಬಿದ್ದಿದೆ.



ಈ ಪ್ರದೇಶದಲ್ಲಿ ಈ ಹಿಂದೆ ಎರಡು ಬಾರಿ ಗುರಿಕಂಡ ಎಂಬಲ್ಲಿ ಬೋನಿಗೆ ಚಿರತೆಗಳು ಬಿದ್ದಿದ್ದವು. ಈಗ ಮತ್ತೊಂದು ಚಿರತೆ ಬಿದ್ದಿರುವುದು ಇಲ್ಲಿನ ಚಿರತೆ ಹಾವಳಿಯ ತೀವ್ರತೆಯನ್ನು ತೋರಿಸುತ್ತದೆ.









