






ವೇಣೂರು : ಬಜಿರೆ, ನಿಟ್ಟಡೆ, ಪಟ್ಟಂದಡ್ಕ ಕ್ಲಸ್ಟರ್ ಮಟ್ಟದ 14 ವರ್ಷದ ಬಾಲಕ ಮತ್ತು ಬಾಲಕಿಯರ ಕಬ್ಬಡಿ ಪಂದ್ಯಾಟದಲ್ಲಿ ವೇಣೂರು ಸರಕಾರಿ ಪ್ರೌಢಶಾಲೆಯ ಬಾಲಕರು ಮತ್ತು ಬಾಲಕಿಯರ ಎರಡು ತಂಡಗಳು ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಅರ್ಹತೆ ಪಡೆದಿರುತ್ತಾರೆ.


ಈ ಸಂದರ್ಭದಲ್ಲಿ ಎಸ್ .ಡಿ.ಎಂ.ಸಿ ಕಾರ್ಯಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ, ಶಿಕ್ಷಕ ರವೀಂದ್ರ ಕೆ., ದೈಹಿಕ ಶಿಕ್ಷಣ ಶಿಕ್ಷಕ ಲೋಕಯ್ಯ .ಎನ್ ಉಪಸ್ಥಿತರಿದ್ದರು.









