






ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ಗ್ರಾಮದ ಕೋರ್ಟ್ ರಸ್ತೆಯ ಬದಿಯಲ್ಲಿ ನಿರ್ಮಾಣಗೊಂಡಿರುವ ಅಪಾಯಕಾರಿ ಗುಂಡಿಯನ್ನು ಮುಚ್ಚುವಂತೆ ಮತ್ತು ದುರಸ್ತಿಪಡಿಸುವ ಬಗ್ಗೆ ತಾಲೂಕು ಪಂಚಾಯತ್ ಕೆಡಿಪಿ ಸದಸ್ಯ ಹಾಗೂ ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಡಿ. ಜಗದೀಶ್ ಅವರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.



ಉದಯನಗರ, ಸಂಜಯನಗರಕ್ಕೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆಯ ಬಲಬದಿ ಅಪಾಯಕಾರಿ ಹೊಂಡ ನಿರ್ಮಾಣ ಆಗಿದ್ದು ತುರ್ತು ದುರಸ್ತಿಗೊಳಿಸಬೇಕಾಗಿದೆ. ದುರಸ್ತಿಗೊಳಿಸದಿದ್ದಲ್ಲಿ ವಾಹನ ಸಂಚಾರಕ್ಕೆ, ಪಾದಾಚಾರಿಗಳಿಗೆ ಮತ್ತು ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಉಂಟಾಗಬಹುದಾದ ಸಾಧ್ಯತೆ ಬಹಳ ಇದೆ. ಈ ಮೊದಲೂ ಸಹ ಇದೇ ರಸ್ತೆಯ ಎರಡೂ ಬದಿಯಲ್ಲಿ ಹೊಂಡ ನಿರ್ಮಾಣವಾದಾಗ ದುರಸ್ತಿ ಮಾಡಲು ವಿನಂತಿಸಿದಾಗ ಒಂದು ಬದಿಯಲ್ಲಿ ಮಾತ್ರ ದುರಸ್ತಿಗೊಳಿಸಿದ್ದರು. ಈಗ ತಕ್ಷಣ ಸ್ಪಂದಿಸಿ ಸರಿಪಡಿಸುವಂತೆ ಮರು ವಿನಂತಿಸಿದ್ದಾರೆ.









