







ಕೊಕ್ಕಡ: ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ನಡೆದ ವ್ಯವಹಾರ, ಅಭಿವೃದ್ಧಿ ಹಾಗೂ ಬೆಳವಣಿಗೆ ಸಮ್ಮೇಳನ ‘ಮೃದಿನಿ’ ಕಾರ್ಯಕ್ರಮದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕದ ವ್ಯವಹಾರ ವಿಭಾಗದ ಉಪಾಧ್ಯಕ್ಷರಾದ ವಿಕ್ಟರ್ ಸುವಾರಿಸ್ ಅವರು ವಲಯದ ಪ್ರತಿಷ್ಠಿತ ‘ಸಾಧನಾಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಡಂತ್ಯಾರಿನಲ್ಲಿ ನಡೆದ ಜೆಸಿಐ ವಲಯ 15ರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ವಿಕ್ಟರ್ ಸುವಾರಿಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.ದಿವಂಗತ ಫಿಲಿಪ್ ಸುವಾರಿಸ್ ಹಾಗೂ ಬೆನೆಡಿಕ್ಟ ಮೆಂಡೊನ್ಸಾ ದಂಪತಿಯ ದ್ವಿತೀಯ ಪುತ್ರರಾದ ವಿಕ್ಟರ್ ಸುವಾರಿಸ್ ಅವರು ಜೆಸಿಐ ಕೊಕ್ಕಡ ಕಪಿಲಾ ಘಟಕದ ಸ್ಥಾಪಕ ಸದಸ್ಯರಾಗಿದ್ದಾರೆ.



ಘಟಕದ ಕಾರ್ಯದರ್ಶಿಯಾಗಿ ಹಾಗೂ ವಿವಿಧ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ಅವರು, ಜೆಸಿಐ ಮೂಲಕ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ವಿವಿಧ ಸಂಘಟನೆಗಳ ಮೂಲಕವೂ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಕ್ಟರ್ ಸುವಾರಿಸ್ ಅವರ ಧರ್ಮಪತ್ನಿ ದೀಪಾ ವಿ., ಘಟಕದ ನಿಕಟಪೂರ್ವ ಅಧ್ಯಕ್ಷೆ ಡಾ. ಶೋಭಾ ಪಿ., ಕಾರ್ಯದರ್ಶಿ ಜೋಯಲ್ ಪಿರೇರಾ, ನೇತ್ರಾವತಿ ಪ್ರಾಂತ್ಯದ ಉಪಾಧ್ಯಕ್ಷ ಜಿತೇಶ್ ಎಲ್. ಪಿರೇರಾ, ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜಾ ಹಾಗೂ ಫಲ್ಗುಣಿ ಪ್ರಾಂತ್ಯದ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಉಪಸ್ಥಿತರಿದ್ದರು.









