ಜನಪದ ಗೀತ ಗಾಯನ ಸ್ಪರ್ಧೆ ನಡ ಸ. ಪ. ಪೂ. ಕಾಲೇಜಿನ ರೇಂಜರ್ಸ್ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ನಡ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ವತಿಯಿಂದ ಸ್ಥಳೀಯ ಸಂಸ್ಥೆ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಎಸ್. ಡಿ. ಎಂ.ಪದವಿ ಪೂರ್ವ ಕಾಲೇಜು ಉಜಿರೆ ಆಯೋಜಿಸಿದ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ಜನಪದ ಗೀತಗಾಯನ ಸ್ಪರ್ಧೆಯಲ್ಲಿ ನಡ ಸರಕಾರಿ ಪದವಿ ಪೂರ್ವ ಕಾಲೇಜಿನ ರೇಂಜರ್ಸ್ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಪ್ರಾಂಶುಪಾಲರಾದ ಲಿಲ್ಲಿ ಪಿ. ವಿ. ಇವರು ಮಾರ್ಗದರ್ಶನ ಮಾಡಿದ್ದರು. ರೇಂಜರ್ ಲೀಡರ್ ವಸಂತಿ ಪಿ. ವ್ಯವಸ್ಥೆ ಗೊಳಿಸಿದ್ದರು. ಕಾಲೇಜಿನ ಎಲ್ಲ ಉಪನ್ಯಾಸಕರು ಸಹಕರಿಸಿದ್ದರು. ಸರಕಾರಿ ಸಂಸ್ಥೆಯ ಮಕ್ಕಳ ಈ ಸಾಧನೆ ಪ್ರಶಂಸನೀಯವಾಗಿದೆ.

LEAVE A REPLY

Please enter your comment!
Please enter your name here