






ಅರಸಿನಮಕ್ಕಿ: ಅರಸಿನಮಕ್ಕಿ–ಬೂಡುಮುಗೇರು ರಸ್ತೆಯಲ್ಲಿ ಹಲವು ಕಡೆಗಳಲ್ಲಿ ದೊಡ್ಡದೊಡ್ಡ ಗುಂಡಿಗಳು ನಿರ್ಮಾಣಗೊಂಡಿದ್ದು, ವಾಹನ ಚಾಲಕರು ಹಾಗೂ ಸಾರ್ವಜನಿಕರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದರು.



ಇದನ್ನು ಮನಗಂಡ ಅರಸಿನಮಕ್ಕಿಯ ರಿಕ್ಷಾ ಚಾಲಕರಾದ ರಾಕೇಶ್ ಶೆಟ್ಟಿ ಹಾಗೂ ಉಪೇಂದ್ರ ಮತ್ತು ಸ್ಥಳೀಯ ಯುವಕರಾದ ಸಲ್ಮಾನ್ ಫರೀಜ್ , ಮಹಮ್ಮದ್ ಫಾಝಲ್, ಬ್ರಿಜೇಶ್, ಶ್ರವಣ್ ಕುಮಾರ್,ಹಾಗೂ ಯುವರಾಜ್ ಬಿ ಎಸ್ ಅವರು ಆಗಸ್ಟ್ 23ರಂದು ಸ್ವಯಂಪ್ರೇರಿತವಾಗಿ ಶ್ರಮದಾನ ನಡೆಸಿದರು.ರಸ್ತೆಯಲ್ಲಿದ್ದ ಗುಂಡಿಗಳಿಗೆ ಕಲ್ಲುಗಳನ್ನು ಹಾಕಿ ಮುಚ್ಚುವ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಯುವಕರ ಈ ಸಾಮಾಜಿಕ ಕಾಳಜಿ ಹಾಗೂ ಶ್ರಮದಾನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









