ನೆರಿಯ ಗಂಡಿಬಾಗಿಲು ಉದಯ ಮಹಾ ಸಂಘ ವತಿಯಿಂದ ರೇಣುಕಾ ಅವರ ಮನೆಯ ಶಂಖು ಸ್ಥಾಪನೆ

0

ನೆರಿಯ: ಉದಯ ಮಹಾಸಂಘ ಗಂಡಿಬಾಗಿಲುಡಿ ಕೆ ಆರ್ ಡಿ ಎಸ್ ( ರಿ ). ಬೆಳ್ತಂಗಡಿ ಇದರ ನೇತೃತ್ವದಲ್ಲಿ ನೆರಿಯ ಗ್ರಾಮದ ರೇಣುಕಾ ಎಂಬುವವರ ಮನೆಯ ಶಂಖು ಸ್ಥಾಪನೆ ಕಾರ್ಯಕ್ರಮವನ್ನು ಆ 20 ನೆರವೇರಿಸಲಾಯಿತು.

ಗಂಡಿಬಾಗಿಲು ಸಂತ ತೋಮಸರ ದೇವಾಲಯ ಧರ್ಮಗುರುಗಳು ಹಾಗೂ ಸಂಸ್ಥೆಯ ಸ್ಥಳೀಯ ನಿರ್ದೇಶಕ ಫಾ.ಬಿನೋಯಿ ಎ ಜೆ ಕಾರ್ಯಕ್ರಮಕ್ಕೆ ಶುಭಹಾರೈಸಿ ಶಂಖಸ್ಥಾಪನೆ ನೆರವೇರಿಸಿದರು.

ಕಳೆದ ವರ್ಷ ನೆರಿಯ ಗ್ರಾಮದಲ್ಲಿ ಮಳೆಗಾಳಿಗೆ ಸುಮಾರು ನೂರಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳು ಹಲವಾರು ಮನೆಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ ಇದರಲ್ಲಿ ರೇಣುಕಾ ಅವರ ಮನೆ ಸಂಪೂರ್ಣವಾಗಿ ಹಾನಿ ಸಂಭವಿಸಿತ್ತು.

ಈ ವಿಷಯವನ್ನು ಮನೆಗೊಂಡು ಉದಯ ಮಹಾ ಸಂಘದ ವತಿಯಿಂದ ಮನೆಯ ನಿರ್ಮಾಣದ ಕಾರ್ಯಕ್ಕೆ ಮಹತ್ವದ ನಿರ್ಣಯವನ್ನು ಕೈಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸ್ನೇಹಜ್ಯೋತಿ ಬೆಳ್ತಂಗಡಿ ತಾಲೂಕು ಒಕ್ಕೂಟ ಇದರ ಅಧ್ಯಕ್ಷ ಫಿಲೋಮಿನಾ ಹಾಗೂ ಸಂಸ್ಥೆಯ ಕಾರ್ಯಕರ್ತ ಜೋನ್ಸನ್ ಉದಯ ಮಹಾಸಂಘದ ಎಲ್ಲಾ ಪದಾಧಿಕಾರಿಗಳು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು ಸ್ಥಳೀಯ ನಿವಾಸಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಸಾಮಾಜಿಕ ಕಾರ್ಯ ಕೈಗೊಂಡ ಮಹಿಳೆಯರ ತಂಡಕ್ಕೆ ಬೆಂಬಲ ನೀಡಿದರು.

LEAVE A REPLY

Please enter your comment!
Please enter your name here