







ಉಜಿರೆ : ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉಜಿರೆ ಸರ್ಕಲ್ ಬಳಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಧ್ವಜಾರೋಹಣವನ್ನು ಮಾಜಿ ಸೈನಿಕರ ಸಂಘದ ಅಧ್ಯಕ್ಷ ತಂಗಚ್ಚನ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್. ವಹಿಸಿದ್ದರು.

ಮಾಜಿ ಸೈನಿಕರ ಸಂಘದ ಸುರೇಶ್ ಗೌಡ,ಸುರೇಶ್ ಭಟ್ ಮತ್ತು ಇನ್ನಿತರ ಯೋಧರು, ಶಕ್ತಿ ಕ್ಲಿನಿಕ್ ನ _ಡಾ. ಪ್ರಕಾಶ್_, ಧ.ಮಂ.ಅ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಉದ್ಯಮಿಗಳಾದ ಗಣೇಶ್ ಫ್ಲೋರ್ ಮಿಲ್ ನ ನಾಗರಾಜ ಕಾಮತ್, ಡಾ. ಸವೇರಾ ಪಿಂಟೋ, ಹೋಟೆಲ್ ಚಿಪ್ಸ್ ವಿಲೇಜ್ ಜಯಂತಿ, ವಿಕ್ರಂ, ಪ್ರಕಾಶ್, ಯೋಗೀಶ್ ಗೌಡ, ಜಾನ್ ಕೆ.ಟಿ., ಜಾನ್ ಎಂ.ಟಿ._, ಬಿ.ಕೆ. ಜೋಸೆಫ್_, ರವಿಪ್ರಸಾದ್_ ಸೇರಿದಂತೆ *ಯೋಧರು, ವೈದ್ಯರು, ಶಿಕ್ಷಕರು, ಉದ್ಯಮಿಗಳು ಮತ್ತು ಹಿರಿಯ ವರ್ತಕರು* ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅನುಗ್ರಹ ಇಂಗ್ಲಿಷ್ ಮೀಡಿಯಂ ಶಾಲೆ, ಜನಾರ್ಧನ ಶಾಲೆ ಮತ್ತು SDM NSS ವಿಭಾಗದ ಮಕ್ಕಳು ದೇಶಭಕ್ತಿ ಗೀತೆ ಹಾಡಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಣ್ಯರು ದೇಶಭಕ್ತಿ, ಏಕತೆ ಮತ್ತು ಸ್ವಾವಲಂಬಿ ಭಾರತ*ದ ಬಗ್ಗೆ ಮಹತ್ವದ ಮಾತುಗಳನ್ನು ಆಡಿದರು. ತಂಗಚ್ಚನ್ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿದ್ದಲ್ಲ.


ಸಾವಿರಾರು ಜನರ ರಕ್ತ, ಬೆವರು ಮತ್ತು ಪ್ರಾಣದ ತ್ಯಾಗದ ಫಲ ಇದು. ಸಿಕ್ಕಿದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ಮತ್ತು ದೇಶದ ಏಕತೆಯನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶದ ಧ್ವಜ ಮತ್ತು ಗೌರವದ ಮುಂದೆ ತಮ್ಮ ಸುಖ-ಭೋಗಗಳು ಹಾಗೂ ಜೀವವೂ ನಗಣ್ಯ ಎನ್ನುವುದು ಯೋಧರ ಅಚಲ ನಂಬಿಕೆ. ಜಾತಿ, ಧರ್ಮಗಳ ಹೆಸರಲ್ಲಿ ಜಗಳವಾಡದೆ, ಎಲ್ಲರೂ ಒಗ್ಗಟ್ಟಿನಿಂದ ಬದುಕುವುದೇ ನಿಜವಾದ ಸ್ವಾತಂತ್ರ್ಯ.ಹಿರಿಯ ವರ್ತಕರು ವ್ಯಾಪಾರದ ಮೂಲಕವೂ ದೇಶ ಸೇವೆ ಮಾಡಬಹುದು ಎಂದು ಹೇಳಿದರು.
ಶಿಕ್ಷಕರು ಮುಂದಿನ ಪೀಳಿಗೆಯಲ್ಲಿ ರಾಷ್ಟ್ರಾಭಿಮಾನ ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು ವೈದ್ಯರು ಮತ್ತು ಉದ್ಯಮಿಗಳು ಸಮಾಜ ಸೇವೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಪಾತ್ರದ ಬಗ್ಗೆ ಮಾತನಾಡಿದರು.ಕಾರ್ಯಕ್ರಮಕ್ಕೆ ಬ್ಯಾಂಡ್ ವಾದನ* ವಿಶೇಷ ಮೆರಗು ನೀಡಿತು. “ಭಾರತ್ ಮಾತಾ ಕಿ ಜೈ” ಘೋಷಣೆಗಳೊಂದಿಗೆ ಧ್ವಜಾರೋಹಣ ನಡೆದು, ದೇಶಭಕ್ತಿ ಗೀತೆಗಳು ಮೊಳಗಿದಾಗ ಎಲ್ಲರ ಕಣ್ಣುಗಳು ಹೆಮ್ಮೆಯಿಂದ ತುಂಬಿದವು.
ಸಂಘದ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಯು.ಎಚ್. ನಿರೂಪಿಸಿದರು.ಸಂಘದ ಅಧ್ಯಕ್ಷರು ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯ ಮತ್ತೊಮ್ಮೆ ತಿಳಿಸಿ, ದೇಶದ ಅಭಿವೃದ್ಧಿಗೆ ವರ್ತಕರ ಸಮುದಾಯವೂ ಕೈಜೋಡಿಸುತ್ತದೆ ಎಂದು ಪ್ರತಿಜ್ಞೆ ಮಾಡಿ ವಂದಿಸಿದರು. ಸಭೆಯಲ್ಲಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.









