






ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕ ಇಲ್ಲಿ ದೇಶದ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಶ್ರದ್ದಾ ಭಕ್ತಿಯಿಂದ ಹಾಗೂ ಸಂಬ್ರಮದಿಂದ ಆಚರಿಸಲಾಯಿತು.



ಸೌಖ್ಯವನದ ಹಿರಿಯ ಸಾಧಕರೂ ಕಳೆದ 12 ವರ್ಷಗಳಿಂದ ಬಂದು ಪ್ರಕೃತಿ ಚಿಕಿತ್ಸೆಯನ್ನು ಪಡೆಯುತ್ತಿರುವ ಬೆಂಗಳೂರಿನ ಶ್ರೀ ಎಂ ಜಿ ಬಲರಾಮ್ ಹಾಗೂ ಯುವ ಉದ್ಯಮಿ ಎರ್ಮಾಳು ಪುಚ್ಚೊಟ್ಟು ಬೀಡು ಚಂದ್ರಹಾಸ ಎಲ್ ಶೆಟ್ಟಿಯವರು ಜಂಟಿಯಾಗಿ ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಗೋಪಾಲ ಪೂಜಾರಿ ಮತ್ತು ಸ್ಥಾನಿಕ ವೈದ್ಯಾಧಿಕಾರಿ ಡಾ ಶೋಭಿತ್ ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು.ಸೌಖ್ಯವನದ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಎಲ್ಲರನ್ನೂ ಸ್ವಾಗತಿಸಿ ನಿರೂಪಿಸಿ ಧನ್ಯವಾದವನ್ನಿತ್ತರು.









