







ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿಶೇಷ ಗ್ರಾಮ ಸಭೆಯು ಆ.13 ರಂದು ನಡೆಯಿತು.
ಸ್ವಾಗತವನ್ನು ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಯಾದ ಪೂರ್ಣಿಮ. ಜೆ ಇವರು ನಡೆಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.


ಗ್ರಾಮ ಆಡಳಿತ ಅಧಿಕಾರಿಯಾದ ಭಾರತಿ ಇವರು ಕಂದಾಯ ಇಲಾಖೆಯಿಂದ ದೊರೆಯವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಪೋಲಿಸ್ ಇಲಾಖೆಯಿಂದ ರಾಜೇಶ್ ಇವರು ಸೈಬರ್ ಕ್ರೈಮ್ ನ ಬಗ್ಗೆ ಮಾಹಿತಿ ನೀಡಿದರು.
ಪಿಲ್ಯ, ಬಡಗಕಾರಂದೂರು, ಸುಲ್ಕೇರಿ ಮೊಗ್ರು, ಗ್ರಾಮಸ್ಥರು ಭಾಗವಹಿಸಿದರು.ಕೊನೆದಾಗಿ ಪೂವಪ್ಪ ಮಲೆಕುಡಿಯ ಗ್ರಾಮ ಪಂಚಾಯತ್ ಲೆಕ್ಕ ಸಹಾಯಕರು ವಂದನಾರ್ಪನೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಿದರು.









