







ಉಜಿರೆ: ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಹಾಗೂ ವಿವಿಧ ಉತ್ಪನ್ನಗಳ ಪರಿಚಯ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಲ್ಹಾರ್ ಎಕ್ಷಿಬಿಟರ್ಸ್ ವೈಶಾಲಿ ಶೆಟ್ಟಿ ಪ್ರಸ್ತುತ ಫ್ಯಾಷನ್ ಎಕ್ಸಿಬಿಷನ್ 2026’ ಆ.15 ಮತ್ತು 16ರಂದು ಉಜಿರೆಯ ಹೋಟೆಲ್ ಓಷನ್ ಪರ್ಲ್‌ನಲ್ಲಿ ನಡೆಯಲಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ 20 ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಸೀರೆಗಳು, ಜ್ಯುವೆಲರಿ, ಹ್ಯಾಂಡ್‌ಬ್ಯಾಗ್‌ಗಳು, ಫ್ಯಾಷನ್ ಆಕ್ಸೆಸರೀಸ್, ಬ್ಯೂಟಿ ಉತ್ಪನ್ನಗಳು, ಆಹಾರ ಉತ್ಪನ್ನಗಳು ಸೇರಿದಂತೆ ವಿವಿಧ ವಸ್ತುಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿರಲಿವೆ.


ಪ್ರದರ್ಶನದಲ್ಲಿ ರೂ.500ರಿಂದ ಆರಂಭವಾಗುವ ಶಾಪಿಂಗ್ ಅವಕಾಶ ಕಲ್ಪಿಸಲಾಗಿದೆ. ವಿವಿಧ ವಿನ್ಯಾಸದ ಸೀರೆಗಳು, ಆಭರಣಗಳು, ಬ್ಯಾಗ್‌ಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ.ಮಹಿಳಾ ಉದ್ಯಮಿಗಳ ಪ್ರತಿಭೆ ಹಾಗೂ ಸ್ವಾವಲಂಬನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಎಕ್ಸಿಬಿಷನ್‌ಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸ್ಥಳ: ಹೋಟೆಲ್ ಓಷನ್ ಪರ್ಲ್, ಉಜಿರೆ ದಿನಾಂಕ: ಆ.15 ಮತ್ತು 16, 2026ಸಮಯ: ಆ.15ರಂದು ಬೆಳಗ್ಗೆ 10ರಿಂದ ಸಂಜೆ 8ರವರೆಗೆ; ಆ.16ರಂದು ಬೆಳಗ್ಗೆ 10ರಿಂದ ಸಂಜೆ 8ರವರೆಗೆ.









