







ಕೊಲ್ಲಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆಯು ಆ.9 ರಂದು ಕೊಲ್ಲಿ ದೇವಸ್ಥಾನದಲ್ಲಿ ನಡೆಯಿತು.



ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಮುಂಬರುವ ಗಣೇಶೋತ್ಸವದ ಯಶಸ್ವಿ ಆಚರಣೆ ಕುರಿತು ಸಮಾಲೋಚನೆ ನಡೆಸಿದರು.ಅಧ್ಯಕ್ಷರಾಗಿ ಕೇಶವ ವಿ ಪಡಕೆ,ಉಪಾಧ್ಯಕ್ಷರಾಗಿ ವನಿತಾಉಮೇಶ್ ಪೂಜಾರಿ, ಕಾರ್ಯದರ್ಶಿ ಸಂದೀಪ್ ಪೂಜಾರಿ ಬೊಳ್ಳಜೆ,ಕೋಶಾಧಿಕಾರಿಯಾಗಿ ಅಭಿಜಿತ್ ಪೂಜಾರಿ ವಳಚ್ಚಿಲಬೆಟ್ಟು, ಗೌರವ ಸಲಹೆಗಾರರಾಗಿ ವಿನಯಚಂದ್ರ ನಡುಬೈಲು, ಸುರೇಶ ಪೂಜಾರಿ ಅಡ್ದದಕರೆ, ವಿಜಯ ಪೂಜಾರಿ ಕಾಜೂರ್,ಮೋನಪ್ಪ ಗೌಡ, ಶ್ರೀನಿವಾಸ್ ರಾವ್ ಕೊಂಬಿ ನಡ್ಕ ಆಯ್ಕೆಯಾದರು.ಹಾಗೂ ಸಮಿತಿಯ ಸದಸ್ಯ ಸ್ವಸ್ತಿಕ್ ಕಂಬಳದಡ್ಡು, ನಿತೇಶ್ ಅಡ್ದದಕರೆ, ಪ್ರಜ್ವಲ್ ನಡ್ತಿಕಲ್, ನಿಕ್ಷಿತ್ ಕೊಲ್ಲಿ, ಸುರೇಶ ಪೂಜಾರಿ ಬನಾದಬಾಗಿಲು, ಪ್ರಶಾಂತ್ ನಡ್ತಿಕಲ್ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.









