ಬಳಂಜ: ಪ್ರಗತಿ ಬಂಧು ಬಿ ಒಕ್ಕೂಟದ ಅಧ್ಯಕ್ಷರಾಗಿ ಅಬೂಬಕ್ಕರ್ ಬಳಂಜ

0

ಬಳಂಜ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಬಳಂಜ ವಲಯ ಇದರ ಪ್ರಗತಿಬಂಧು ಬಿ.ಒಕ್ಕೂಟದ ಅಧ್ಯಕ್ಷರಾಗಿ ಸಮಾಜಸೇವಕರಾದ ಅಬೂಬಕ್ಕರ್ ಬಳಂಜ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಒಕ್ಕೂಟ ಸಭೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ಉಪಾಧ್ಯಕ್ಷರಾಗಿ ಮೀನಾಕ್ಷಿ, ಕಾರ್ಯದರ್ಶಿಯಾಗಿ ಯಶೋಧ,ಜೊತೆ ಕಾರ್ಯದರ್ಶಿಯಾಗಿ ಸುಮನಾಜಿ,ಕೋಶಾಧಿಕಾರಿಯಾಗಿ ರಮೇಶ ಆಚಾರ್ಯ ಹೊಸಮನೆ ಇವರನ್ನು ಆಯ್ಕೆ ಮಾಡಲಾಗಿದೆ.

ಅಬೂಬಕ್ಕರ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಲ್ಲಾ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸೇವಾಪ್ರತಿನಿಧಿ ಪ್ರಮೀಳಾ ಆಚಾರ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here