ಬೆಳ್ತಂಗಡಿ ಕಂದಾಯ ಇಲಾಖೆ ಮೇಲೆ ಲೋಕಾಯುಕ್ತ ದಿಢೀರ್ ಭೇಟಿ

0

ಬೆಳ್ತಂಗಡಿ: ಕಂದಾಯ ಇಲಾಖೆಯ ಮೇಲೆ ಬಂದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸರು ಆ.12 ಬೆಳ್ತಂಗಡಿ ಆಡಳಿತ ಸೌಧದಲ್ಲಿರುವ ಕಂದಾಯ ಇಲಾಖೆ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಬೆಳಗ್ಗೆ 11:30ಕ್ಕೆನಡೆದ ಈ ಕಾರ್ಯಾಚರಣೆಯನ್ನು ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ 7 ಮಂದಿಯ ತಂಡ ದಾಳಿ ನಡೆಸಿತು.ದಾಳಿಯ ವೇಳೆ ತಂಡವು ಕಚೇರಿಯಲ್ಲಿ ಇದ್ದ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿತು.

ಭೂ ದಾಖಲೆ, ಆರ್‌ಟಿಸಿ, ಮ್ಯುಟೇಷನ್, ಪಹಣಿ ಸೇರಿದಂತೆ ವಿವಿಧ ಕಡತಗಳ ವಿಲೇವಾರಿಯಲ್ಲಿ ವಿಳಂಬ ಮತ್ತು ಅನಧಿಕೃತ ಹಣ ಪಡೆಯುವ ಆರೋಪದ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಯಿತು. ಕಚೇರಿಯ ಫೈಲ್‌ಗಳು, ದಾಖಲೆ ರಿಜಿಸ್ಟರ್ ಮತ್ತು ಸಿಬ್ಬಂದಿಯ ಕೆಲಸದ ವಿಧಾನವನ್ನು ಅಧಿಕಾರಿಗಳು ಪರಿಶೀಲಿಸಿದರು.

ದಾಳಿಯ ಸುದ್ದಿ ತಿಳಿದು ಇಲಾಖೆಯ ಸಿಬ್ಬಂದಿಯಲ್ಲಿ ತಳಮಳ ಕಂಡು ಬಂತು.ಘಟನೆಯಿಂದಾಗಿ ಕೆಲ ಹೊತ್ತು ಆಡಳಿತ ಸೌಧದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

LEAVE A REPLY

Please enter your comment!
Please enter your name here