ಬೆಳ್ತಂಗಡಿ ಆನ್ಸ್ ಕ್ಲಬ್ ನೂತನ ಅಧ್ಯಕ್ಷೆ ರಾಜಶ್ರೀ ಡಿ. ರಾವ್, ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

0

ಬೆಳ್ತಂಗಡಿ : ರೋಟರಿ ಕ್ಲಬ್ ಇದರ ಅನ್ಸ್ ಕ್ಲಬ್ 2026-27ನೇ ಸಾಲಿನ ನೂತನ ಅಧ್ಯಕ್ಷೆ ರಾಜಶ್ರೀ ಡಿ. ರಾವ್ ಮತ್ತು ಇತರ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಆ. 8ರಂದು ಲಾಯಿಲ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ನಡೆಯಿತು.

ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಶ್ರುತಿ ಮಾಡ್ತ ಪದಪ್ರಧಾನ ಅಧಿಕಾರಿಯಾಗಿ ಆಗಮಿಸಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ತುಮಕೂರು ವಿದ್ಯಾನಿಧಿ ಪಿ. ಯು.ಕಾಲೇಜು ಉಪನ್ಯಾಸಕಿ ಆರತಿ ಪಟ್ರಮೆ ಭಾಗವಹಿಸಿದರು.

ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ. ಶಶಿಧರ ಡೋಂಗ್ರೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ವಾಗುವ ರೋಟರಿ ಗುರುಕುಲ ಕಾರ್ಡ್ ನ್ನು ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಲಾಯಿತು.ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ. ವಿ. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ಕಾರ್ಯದರ್ಶಿ ಡಾ. ರಾಘವೇಂದ್ರ ಪೆದಮಲೆ ಉಪಸ್ಥಿತರಿದ್ದರು. ನಿಕಟ ಪೂರ್ವ ಅಧ್ಯಕ್ಷೆ ಗಾಯತ್ರಿ ಶ್ರೀಧರ್ ನೂತನ ಅಧ್ಯಕ್ಷೆ ರಾಜಶ್ರೀ ಡಿ. ರಾವ್ ಮಾತನಾಡಿದರು ನಿಕಟಪೂರ್ವ ಕಾರ್ಯದರ್ಶಿ ಡಾ. ವಿನಯ ಕಿಶೋರ್ ವರದಿ ವಾಚಿಸಿದರು ಡಾ. ದೀಪಾಲಿ ಡೋಂಗ್ರೆ ಮತ್ತು ಡಾ. ಆಶಾ ಪೆದಮಲೆ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಅಪರ್ಣ ವಾಟ್ವೆ ವಂದಿಸಿದರು.ಕಾರ್ಯಕ್ರಮದ ಮೊದಲು ಪ್ರತೀಕ್ಷಾ ಆಚಾರ್ಯ ಮತ್ತು ಸಹೋದರಿಯರಿಂದ ಭರತನಾಟ್ಯ ನಡೆಯಿತು.

ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here