







ಮುಂಡಾಜೆ : ದೇವಾಂಗ ಸಮಾಜ -ಮುಂಡಾಜೆ ಘಟಕದ ವತಿಯಿಂದ ಆ.16ರಂದು ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ದಕ್ಷಿಣ ಕನ್ನಡ ಜಿಲ್ಲೆಯ ದೇವಾಂಗ ಸಮಾಜದ “ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ”ದ ಆಮಂತ್ರಣ ಪತ್ರಿಕೆಯನ್ನು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್. ಜನಾರ್ಧನ ಸಿರಿ ಸಂಸ್ಥೆಯ ಕಚೇರಿಯಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ದೇವಾಂಗ ಸಮಾಜ -ಉಜಿರೆ ವಲಯದ ಅಧ್ಯಕ್ಷ ರವಿ ನೈಯ್ಯಾಲು, ಮುಂಡಾಜೆ ಘಟಕದ ಅಧ್ಯಕ್ಷ ರಾಜ್ ಗೋಪಾಲ್, ನೂತನ ಅಧ್ಯಕ್ಷ ಶಶಿಧರ್, ಬನಶಂಕರಿ ಕೊಡಂಗೆ, ನೂತನ ಕಾರ್ಯದರ್ಶಿ ಸಚಿನ್ ಎಂ.ಎಸ್, ಮುಂಡಾಜೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶl ವಸಂತಿ, ರಾಜೇಶ್ ಮುಂಡಾಜೆ, ಪುಷ್ಪಾ ಕಡಂಬಳ್ಳಿ, ಹೇಮಾ ರಾಜೇಶ್, ರಕ್ಷಿತಾ ಶಶಿಧರ್, ದೀಕ್ಷಿತಾ ಸಚಿನ್, ಶಾರದಾ ಮತ್ತಿತರರು ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ಸಿಬ್ಬಂದಿ ಯತೀಶ್, ವಿನ್ಸೆಂಟ್ ಲೋಬೋ ನಿರ್ವಹಿಸಿದರು.









