






ಅಳದಂಗಡಿ: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಇದರ ಸುವರ್ಣ ಮಹೋತ್ಸವ ಆಚರಣೆಯ ಸಿದ್ಧತೆಗಳ ಕುರಿತು ಸರ್ವ ಸದಸ್ಯರ ಸಮಾಲೋಚನಾ ಸಭೆಯನ್ನು ಆ. 09 ರಂದು ಪೂರ್ವಾಹ್ನ 10:00 ಗಂಟೆಗೆ ಶ್ರೀ ದೀಪಾ ಸಭಾ ಭವನ, ಮಿತ್ತರೋಡಿ, ಕೆದ್ದು ಎಂಬಲ್ಲಿ ನಡೆಯಲಿದೆ.


ಸಂಘದ ವತಿಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಸುವರ್ಣ ಮಹೋತ್ಸವವನ್ನು ಎಲ್ಲರನ್ನು ಸೇರಿಸಿಕೊಂಡು ಜನರಿಗೆ ನೆನಪಿನಲ್ಲಿ ಉಳಿಯುವಂತ ಕಾರ್ಯಕ್ರಮ ಮಾಡುವ ಸಲುವಾಗಿ ಸದಸ್ಯರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲು ಈ ಸಭೆಯನ್ನು ಆಯೋಜಿಸಲಾಗಿದೆ.
ಸಂಘದ ಪ್ರಗತಿಯಲ್ಲಿ ಸದಾ ಕೈಜೋಡಿಸಿರುವ ಎಲ್ಲಾ ಗೌರವಾನ್ವಿತ ಸದಸ್ಯರು ನಿಗದಿತ ದಿನದಂದು ಸಭೆಗೆ ತಪ್ಪದೆ ಹಾಜರಾಗಿ, ಸಂಘದ ಅಭಿವೃದ್ಧಿ ಹಾಗೂ ಸುವರ್ಣ ಮಹೋತ್ಸವ ಯಶಸ್ಸಿಗೆ ತಮ್ಮ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಬೇಕಾಗಿ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯು ಈ ಮೂಲಕ ವಿನಂತಿಸಿದೆ.









