







ಬೆಳ್ತಂಗಡಿ: ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಅವರ ಶುಭಾಶೀರ್ವಾದ, ರಂಗ್ ದ ರಾಜೆ ಸುಂದರ ರೈ ಮಂದಾರ ಮಾರ್ಗದರ್ಶನ ಮತ್ತು ಕುಸಲ್ದರಸೆ ನವೀನ್ ಡಿ. ಪಡೀಲ್ ಸಲಹೆ ಸಹಕಾರದಲ್ಲಿ ಉಜಿರೆಯ ಮಂದಾರ ಕಲಾವಿದರು ಅಭಿನಯಿಸುವ ಈ ವರುಷದ ಭಾವನಾತ್ಮಕ ತುಳು ಹಾಸ್ಯಮಯ ಕಲಾಕಾಣಿಕೆ ಯೇರೆಡ ಪನೊಡು ನಾಟಕದ ಪ್ರಥಮ ಪ್ರದರ್ಶನ ಉಜಿರೆ ಅನುಗ್ರಹ ಶಾಲಾ ಬಳಿಯ ಅನುಗ್ರಹ ಅಡಿಟೋರಿಯಂನಲ್ಲಿ ಆ.15ರಂದು ಸಂಜೆ 6.30ಕ್ಕೆ ನಡೆಯಲಿದೆ.


ಗುಣಪಾಲ್ ಎಂ.ಎಸ್. ಉಜಿರೆ ಕಥೆ, ಸಂಭಾಷಣೆ ಬರೆದು ಸಾರಥ್ಯ ವಹಿಸಲಿದ್ದು ವಿ. ಎಸ್. ಶಶಿಧರ ದೇವಾಡಿಗ ನಿರ್ದೇಶಿಸಲಿದ್ದಾರೆ.ಸಂಚಾಲಕರಾಗಿ ಪ್ರವೀಣ್ ಎನ್. ಉಜಿರೆ ಕಾರ್ಯ ನಿರ್ವಹಿಸಲಿದ್ದು ತಂಡದ ಸಮಗ್ರ ನಿರ್ವಹಣೆಯನ್ನು ಚೇತನಾ ಗುಣಪಾಲ್ ಉಜಿರೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.









